ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿತ್ಯವೂ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡಿನ ಜನರು ಅಕ್ಷರಶಃ ನಲುಗಿದ್ದಾರೆ. ಮೂಡಿಗೆರೆ ತಾಲೂಕಿನ ಹತ್ತಾರೂ ಹಳ್ಳಿಗಳ ಜನರಿಗೆ ದಿನಬಳಕೆಯ ವಸ್ತುಗಳು ಸಿಗದಂತಾಗಿದೆ. ಹೀಗಾಗಿ ಚಿಕ್ಕಮಗಳೂರಿನ ಯುವಕರ ತಂಡವೊಂದು ದಿನಬಳಕೆಯ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ನೀಡುತ್ತಿದೆ.
1 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಈ ಯುವಕರ ತಂಡ ಸಂಗ್ರಹಿಸಿದೆ. ಬ್ರೆಡ್, ಬಿಸ್ಕೆಟ್, ಬೆಡ್ ಶೀಟ್, ಚಾಪೆ, ಟೂತ್ ಪೇಸ್ಟ್, ಬ್ರಶ್, ಔಷಧಿಗಳು, ಬಟ್ಟೆ, ಸೇರಿದಂತೆ ಹಲವಾರು ವಸ್ತುಗಳು ಸಂಗ್ರಹವಾಗಿವೆ. ಎಲ್ಲವನ್ನೂ ತುಂಬಿಕೊಂಡು ವಾಹನದ ಮೂಲಕ ಮೂಡಿಗೆರೆ ಭಾಗಕ್ಕೆ ಈ ಯುವಕರು ತೆರಳುತ್ತಿದ್ದಾರೆ. ಈ ಯುವಕರ ಕಾರ್ಯಕ್ಕೆ ನಗರ ಪ್ರದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರು ಕೂಡ ಸಹಾಯ ಮಾಡಲು ಮುಂದೆ ಬಂದಿದೆ.