ಚಿಕ್ಕಮಗಳೂರು: ತಾಲೂಕಿನ ಮಲ್ಲಂದೂರು ಪೊಲೀಸ್ ಸಿಬ್ಬಂದಿ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಯುವಕನ ಸ್ಟೈಲಿಶ್ ಹೇರ್ಗೆ ಮಲ್ಲಂದೂರು ಪೊಲೀಸರು ಕತ್ತರಿ ಹಾಕಿಸಿದ್ದು, ಯುವಕನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.
ಹೌದು, ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರಿನಲ್ಲಿ ಸುನೀಲ್ ಎಂಬಾತ ಶೇಖರ್ ಎಂಬುವವರ ಫೇಸ್ಬುಕ್ನಲ್ಲಿ ಅವರ ಫೋಟೋಗೆ ಕಾಮೆಂಟ್ ಮಾಡಿದ ಹಿನ್ನೆಲೆ ಶೇಖರ್ ಪೊಲೀಸರನ್ನು ಮುಂದೆ ಬಿಟ್ಟು ಈ ರೀತಿ ಮಾಡಿಸಿದ್ದಾರೆಂದು ಪೊಲೀಸರ ಮೇಲೆ ಯುವಕ ಗಂಭೀರ ಆರೋಪ ಮಾಡಿದ್ದಾನೆ.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶೇಖರ್ ಅವರ ಭಾವಚಿತ್ರಕ್ಕೆ ಕಾಮೆಂಟ್ ಮಾಡಿದ್ದಕ್ಕೆ ಶೇಖರ್ ದೂರಿನ ಹಿನ್ನೆಲೆ ಸುನಿಲ್ ನನ್ನನ್ನು ಪೊಲೀಸರು ಠಾಣೆಗೆ ಕರೆಸಿ ಹೇರ್ ಸಲೂನ್ ಶಾಪ್ಗೆ ಕರೆದುಕೊಂಡು ಹೋಗಿ ಕೂದಲು ಕತ್ತರಿಸಿ, ಮೊಬೈಲ್ ಕಿತ್ತುಕೊಂಡು ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಜಿಲ್ಲಾಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನೀಲ್ ಮಲ್ಲಂದೂರು ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾನೆ.
ಈ ಕುರಿತು ಠಾಣೆಯ ಪಿಎಸ್ಐ ರೇಣುಕಾ ಎಫ್ಐಆರ್ ದಾಖಲಿಸದೆ ಸುನೀಲ್ಗೆ ಥಳಿಸಿದ್ದಾರೆ ಎಂದು ಸುನೀಲ್ ಕುಟುಂಬದ ಸದಸ್ಯರು ಕೂಡ ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ವಿನಂತಿಸಿದ್ದಾರೆ.