ETV Bharat / state

ಚಿಕ್ಕಮಗಳೂರು: ಪಿಸ್ತೂಲ್‌, ಮಾರಕಾಸ್ತ್ರ ಹಿಡಿದು ಬೆದರಿಸುತ್ತಿದ್ದ ವ್ಯಕ್ತಿ ಬಂಧನ - ಕಡೂರು ಪೊಲೀಸರು

ಪಿಸ್ತೂಲ್‌​ ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ.

suspicious-man-with-gun-was-arrested-in-chikkamagaluru
ಚಿಕ್ಕಮಗಳೂರು : ಗನ್ ಹಿಡಿದು ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿ ಬಂಧನ
author img

By ETV Bharat Karnataka Team

Published : Oct 9, 2023, 6:31 PM IST

ಪಿಸ್ತೂಲ್‌ ಹಿಡಿದು ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿ ಸೆರೆ

ಚಿಕ್ಕಮಗಳೂರು : ಪಿಸ್ತೂಲ್‌​ ಹಿಡಿದು ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಯುವಕನನ್ನು ಕಡೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಬೀರೂರು ನಿವಾಸಿ ಸಮೀರ್​ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಒಂದು ಕಂಟ್ರಿ ಮೇಡ್​​ ಪಿಸ್ತೂಲ್‌, 8 ಜೀವಂ​ತ ಗುಂಡು, ಡ್ರಾಗರ್​ ಸೇರಿದಂತೆ 40 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಮೀರ್​ ಕಡೂರಿನ ಎಪಿಎಂಸಿ‌ ಮಾರುಕಟ್ಟೆ ಬಳಿ ಪಿಸ್ತೂಲ್‌ ಹಿಡಿದು ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರಿಗೆ ಬೆದರಿಸುತ್ತಿದ್ದನು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಮೀರ್​ ಸೆಕೆಂಡ್ ಹ್ಯಾಂಡ್ ಕಾರು, ಬೈಕ್ ವ್ಯಾಪಾರ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಮಾತನಾಡಿ, "ಅಕ್ಟೋಬರ್ 8ರಂದು ಕಡೂರು ಪೊಲೀಸರು ಗಸ್ತು ತಿರುಗುತ್ತಿದ್ದಾಗ ವ್ಯಕ್ತಿಯೋರ್ವ ಇಲ್ಲಿನ ಎಪಿಎಂಸಿ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಕೂಡಲೇ ಪೊಲೀಸ್​ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ವ್ಯಕ್ತಿಯೋರ್ವ ಅನುಮಾನಾಸ್ಪವಾಗಿ ತಿರುಗುತ್ತಿರುವುದು ಕಂಡುಬಂದಿದೆ. ತಕ್ಷಣ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಕಡೂರು ತಾಲೂಕಿನ ಸಮೀರ್ ಎಂದು ಗುರುತಿಸಲಾಗಿದೆ. ಒಂದು ಪಿಸ್ತೂಲ್‌​, 8 ಗುಂಡುಗಳು, 50 ಗ್ರಾಂ ಗಾಂಜಾ ಜೊತೆಗೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಿವಿಧ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ತಿಳಿಸಿದರು.

"ಪಿಸ್ತೂಲ್‌​ ಮತ್ತು ಗಾಂಜಾ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಮಹಾರಾಷ್ಟ್ರದ ಜಲಗಾಂವ್​ನ ಮಯೂರ ಮತ್ತು ರಾಹುಲ್​ ಎಂಬಿಬ್ಬರು ಸಮೀರ್​ಗೆ ಪಿಸ್ತೂಲ್‌​ ಪೂರೈಕೆ ಮಾಡಿದ್ದಾರೆ. ಈ ಆರೋಪಿಗಳು ಇಲ್ಲಿಗೆ ಬಂದಾಗ ಪರಿಚಯವಾಗಿ ಸಮೀರ್​ಗೆ ಗಾಂಜಾ ​ಪೂರೈಕೆ ಮಾಡುತ್ತಿದ್ದರು. ಈ ವೇಳೆ ಆರೋಪಿ ಇವರಿಗೆ ಹಣ ನೀಡಿ ಕಂಟ್ರಿ ಮೇಡ್​ ಪಿಸ್ತೂಲ್​ ಖರೀದಿಸಿದ್ದಾನೆ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ" ಎಂದು ಹೇಳಿದರು.

"ಪ್ರಕರಣದ ತನಿಖೆಗೆ ಎರಡು ತಂಡಗಳನ್ನು ರಚಿಸಲಾಗಿದೆ. ಪಿಸ್ತೂಲ್‌​ ಮತ್ತು ಗಾಂಜಾ ಪೂರೈಕೆ ಮಾಡಿದವರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಆರೋಪಿ ಯಾಕೆ ಪಿಸ್ತೂಲ್‌​ ಇಟ್ಟುಕೊಂಡಿದ್ದ ಎಂಬ ಬಗ್ಗೆ ಇನ್ನಷ್ಟೇ ತನಿಖೆಯಲ್ಲಿ ತಿಳಿದುಬರಬೇಕಿದೆ. ಸಮೀರ್​ ವಿರುದ್ಧ ಈ ಹಿಂದೆ ಅಜ್ಜಂಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಡ್ಯಾನ್ಸ್ ವಿಚಾರವಾಗಿ ಗಣೇಶ ಮೂರ್ತಿ ನಿಮಜ್ಜನ ವೇಳೆ ಮಾರಾಮಾರಿ: ಓರ್ವನ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.