ETV Bharat / state

ಮಾರ್ಚ್ - ಮೇನಲ್ಲಿ ಕೊರೊನಾದಿಂದ ಹೊರಬರುವ ನಂಬಿಕೆ ಇದೆ: ವಿನಯ್ ಗುರೂಜಿ ವಿಶ್ವಾಸ - ಅವಧೂತ ವಿನಯ್ ಗುರೂಜಿ

ನಾನು ಮೆಡಿಟೇಷನ್ ಮಾಡಿದಂತೆ ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಇನ್ನೂ ಮೂರು - ನಾಲ್ಕು ತಿಂಗಳು ಕೊರೊನಾ ಎಳೆಯಬಹುದು. ಮಾರ್ಚ್ - ಮೇನಲ್ಲಿ ಇದರಿಂದ ಹೊರಬರುವ ನಂಬಿಕೆ ಇದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ.

ವಿನಯ್ ಗುರೂಜಿ
ವಿನಯ್ ಗುರೂಜಿ
author img

By

Published : Dec 11, 2021, 7:21 PM IST

ಚಿಕ್ಕಮಗಳೂರು: ಇನ್ನೂ ಮೂರು - ನಾಲ್ಕು ತಿಂಗಳು ಕೊರೊನಾ ಎಳೆಯಬಹುದು. ಮಾರ್ಚ್ - ಮೇನಲ್ಲಿ ಇದರಿಂದ ಹೊರಬರುವ ನಂಬಿಕೆ ಇದೆ. ಮೆಡಿಟೇಷನ್ ಮಾಡಿದಂತೆ ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ದತ್ತಪೀಠದಲ್ಲಿ ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ.

ವಿನಯ್ ಗುರೂಜಿ ಹೇಳಿಕೆ

ಮನುಷ್ಯನಿಗೆ ವಿಲ್ ಪವರ್ ದೊಡ್ಡ ಶಕ್ತಿ. ಜನ ಕಾನ್ಫಿಡೆನ್ಸ್ ಕಳೆದುಕೊಳ್ಳುವುದು ಬೇಡ. ಎಲ್ಲವನ್ನೂ ದೇವರು ಮಾಡಲಿ, ಮ್ಯಾಜಿಕ್ ಆಗಲಿ, ಪವಾಡ ಆಗಲಿ ಅಂದ್ರೆ ಆಗಲ್ಲ. ನಮ್ಮ ಪ್ರಯತ್ನವೇ ನಿಜವಾದ ಪವಾಡ. ಜನ, ಸರ್ಕಾರ, ಪಕ್ಷಗಳು ಎಲ್ಲರೂ ದೂರಿಕೊಳ್ಳುವುದು ಸರಿಯಲ್ಲ. ಎಲ್ಲ ಜನರನ್ನ ರಕ್ಷಿಸಿಸಲು ಎಂದು ಒಮ್ಮತದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ನಂತರ ದತ್ತಪೀಠದ ವಿಚಾರವಾಗಿ ಮಾತನಾಡಿದ ಇವರು ದತ್ತಪೀಠ ಪ್ರಾಧಿಕಾರ ಮಾಡಿ ಇದನ್ನ ಅಭಿವೃದ್ಧಿ ಮಾಡಬೇಕು ಎಂದು ಮುಖ್ಯಮಂತ್ರಿ, ಪ್ರವಾಸೋದ್ಯಮ ಸಚಿವರಿಗೆ ಅವಧೂತ ವಿನಯ್ ಗುರೂಜಿ ಮನವಿ ಮಾಡಿದ್ದಾರೆ. ದತ್ತಪೀಠದಲ್ಲಿ ಶೌಚಾಲಯಗಳನ್ನ ಕ್ಲೀನ್ ಮಾಡಿ ಬಂದೆ. ವೀಕೆಂಡ್​ನಲ್ಲಿ 2,000ಕ್ಕೂ ಅಧಿಕ ವಾಹನಗಳಲ್ಲಿ ಜನ ಬರುತ್ತಾರೆ. ಗುರು ಅನ್ನೋದಕ್ಕಿಂತ ಜನ ಸಾಮಾನ್ಯನಾಗಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ.

ಮಹಿಳೆಯರಿಗೆ ಇನ್ನೂ ಹೆಚ್ಚು ಶೌಚಾಲಯ ನಿರ್ಮಿಸಿ ಕೊಡಲಿ. ದುಡ್ಡಿದ್ದವರು ರೆಸಾರ್ಟ್ ಗೆ ಹೋಗ್ತಾರೆ, ಬಡವರು ಎಲ್ಲಿ ಹೋಗ್ತಾರೆ. ಬಡವರು ಟೂರ್ ಮಾಡಬಾರದು ಎಂದು ರೂಲ್ ಇಲ್ಲ. ಸಂಬಂಧಪಟ್ಟವರಿಗೆ ಖುದ್ದು ನಾನೇ ಪತ್ರ ಬರೆಯುತ್ತೇನೆ. ಸ್ಪಂದಿಸಿ, ಮುಂದಿನ ವರ್ಷದೊಳಗೆ ಸ್ವಲ್ಪ ವ್ಯವಸ್ಥೆ ಮಾಡಲಿ ಎಂದರು.

ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ನಟ ಕಿಚ್ಚ ಸುದೀಪ್

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.