ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಶಾರದಾ ಪೀಠದಲ್ಲಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಮಠದ ಭಕ್ತರು ಬಿಡಿಸಿದ ವಿಶ್ವದ ಅತಿ ದೊಡ್ಡ ರಂಗೋಲಿ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ.
ಲಕ್ಷ ದೀಪೋತ್ಸವದ ಪ್ರಯುಕ್ತ ಇಪ್ಪತ್ತು ಭಕ್ತರು ಸತತ ನಾಲ್ಕು ಗಂಟೆಗಳ ಕಾಲ ಮಠದ ಆವರಣದಲ್ಲಿ ಪಾರಂಪರಿಕ ರಂಗೋಲಿ ಚಿತ್ರವನ್ನು ಬಿಡಿಸಿದ್ದಾರೆ. ಇದು ವಿಶ್ವದ ಅತಿದೊಡ್ಡ ರಂಗೋಲಿ ಎಂದೇ ಹೇಳಲಾಗುತ್ತಿದೆ. ಹಲವು ಆಕರ್ಷಕ ಬಣ್ಣಗಳಿಂದ ಈ ಚಿತ್ತಾರ ಬಿಡಿಸಿದ್ದು ಭಕ್ತರ ಗಮನ ಸೆಳೆದಿದೆ.
ಈ ಅಪರೂಪದ ರಂಗೋಲಿಯಿಂದ ಶೃಂಗೇರಿ ಪೀಠದ ಆವರಣವೇ ಸುಂದರವಾಗಿ ಕಂಗೊಳಿಸುತ್ತಿದೆ.