ಚಿಕ್ಕಮಗಳೂರು: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಿಎಂ ಆಗಬೇಕೆಂದು ಚಿಕ್ಕಮಗಳೂರಿನ ಗಣಪತಿ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಹಾಗೂ ಹೋಮ ನೆರವೇರಿಸಿದ್ದಾರೆ.
ಸಂಕಷ್ಟ ಚತುರ್ಥಿ ದಿನದಂದು ಈ ವಿಶೇಷ ಪೂಜೆ ಮಾಡಿಸಿದ್ದು, ಹೋಮದ ಪೂರ್ಣಾಹುತಿಯಲ್ಲಿ ಸಿ.ಟಿ.ರವಿ ಸಿಎಂ ಆಗಲೆಂದು ಸಂಕಲ್ಪ ಮಾಡಿದರು.