ETV Bharat / state

ಸ್ಪೀಕರ್ ರಮೇಶ್​​ ಕುಮಾರ್​​​ ನಿರ್ಧಾರ ಸ್ವಾಗತರ್ಹ: ಶಾಸಕ ರಾಜೇಗೌಡ

ಅತೃಪ್ತ ಶಾಸಕರ ವಿಚಾರದಲ್ಲಿ ಸ್ಪೀಕರ್ ಕೆ.ರಮೇಶ್ ಕುಮಾರ್ ಅವರು ತೆಗೆದುಕೊಂಡಿರುವ ತೀರ್ಮಾನವನ್ನು ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಹೃದಯಪೂರ್ವಕವಾಗಿ ಸ್ವಾಗತಿಸಿದ್ದು, ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗಲು ರಾಜ್ಯಪಾಲರು ಅವಕಾಶ ಕೊಡಬೇಕಾದರೆ ಶೇ. 51ರಷ್ಟು ಮತ ಇದೆಯಾ ಎಂದು ಯೋಚನೆ ಮಾಡಬೇಕಿತ್ತು. ಆದರೆ ರಾಜೀನಾಮೆ ಅಂಗೀಕಾರ ಆಗುವುದಕ್ಕಿಂತ ಮುಂಚೆ ಮುಖ್ಯಮಂತ್ರಿ ಆಗಲು ಅವಕಾಶ ಮಾಡಿಕೊಟ್ಟಿರುವುದು ಸಂವಿಧಾನ ವಿರೋಧಿ ನಿಲುವು ಎಂದಿದ್ದಾರೆ.

ಟಿ.ಡಿ ರಾಜೇಗೌಡ
author img

By

Published : Jul 28, 2019, 8:28 PM IST

ಚಿಕ್ಕಮಗಳೂರು: ಅತೃಪ್ತ ಶಾಸಕರ ವಿಚಾರದಲ್ಲಿ ಸ್ಪೀಕರ್ ಕೆ.ರಮೇಶ್ ಕುಮಾರ್ ಅವರು ತೆಗೆದುಕೊಂಡಿರುವ ತೀರ್ಮಾನವನ್ನು ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಹೃದಯಪೂರ್ವಕವಾಗಿ ಸ್ವಾಗತಿಸಿದ್ದು, ರಾಜ್ಯಪಾಲರ ಮೇಲೆ ಗರಂ ಆಗಿದ್ದಾರೆ.

ಸ್ಪೀಕರ್ ಕೆ.ರಮೇಶ್ ಕುಮಾರ್ ನಿರ್ಧಾರ ಕುರಿತು ಟಿ.ಡಿ ರಾಜೇಗೌಡ ಪ್ರತಿಕ್ರಿಯೆ

ಜನರು ಆಯ್ಕೆ ಮಾಡಿದ ಮೇಲೆ ಅವಧಿ ಪೂರ್ಣ ಆಗುವವರೆಗೂ ಕೆಲಸ ಮಾಡಬೇಕು. ಹಣ ಕಂಡರೆ ಹೆಣ ಕೂಡ ಬಾಯಿ ಬಿಡುವ ರೀತಿಯಲ್ಲಿ ಸಾವಿರಾರೂ ಕೋಟಿ ರೂ. ಬೆಲೆ ಕೊಟ್ಟು ಶಾಸಕರನ್ನು ಕೊಂಡುಕೊಳ್ಳುತ್ತಿದ್ದಾರೆ. ಇದಕ್ಕೆ ಹಣ ಎಲ್ಲಿಂದ ಬರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಶಾಸಕರು ಆರೋಗ್ಯ ಸಮಸ್ಯೆ ಇತರೆ ಸಮಸ್ಯೆಗಳ ಕುರಿತು ರಾಜೀನಾಮೆ ನೀಡಬಹುದು. ಆದ್ರೆ ಗುಂಪು ಗುಂಪಾಗಿ ರಾಜೀನಾಮೆ ನೀಡಿ, ರೆಸಾರ್ಟ್​ಗೆ ಹೋಗಿ ಕುಳಿತಿರೋದು ತಪ್ಪು. ಹಾಗಾಗಿ ಇವರು ಪಕ್ಷಾಂತರ ನಿಷೇಧ ಕಾಯ್ದೆಗೆ ಒಳಪಡುತ್ತಾರೆ ಎಂದರು.

ರಾಜ್ಯಪಾಲರು, ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗಲು ಅವಕಾಶ ಕೊಡಬೇಕಾದರೆ ಇವರಿಗೆ ಶೇ. 51ರಷ್ಟು ಮತ ಇದೆಯಾ ಎಂದು ಯೋಚನೆ ಮಾಡಬೇಕಿತ್ತು. ಆದರೆ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಆಗುವುದಕ್ಕಿಂತ ಮುಂಚೆ ಅಥವಾ ಅನರ್ಹತೆ ಆಗೋದಕ್ಕಿಂತ ಮೊದಲು ಮುಖ್ಯಮಂತ್ರಿ ಆಗಲು ಅವಕಾಶ ಮಾಡಿಕೊಟ್ಟಿರುವುದು ಸಂವಿಧಾನ ವಿರೋಧಿ ನಿಲುವು. ಇದರಿಂದ ನಮಗೆ ನೋವಾಗಿದೆ. ಕಾನೂನು, ಪ್ರಜಾಪ್ರಭುತ್ವ, ಸಂವಿಧಾನ ಎತ್ತಿ ಹಿಡಿಯಬೇಕಾದವರೇ ಅದರ ವಿರುದ್ಧ ನಡೆದುಕೊಂಡಾಗ ಏನಾಗುತ್ತದೆ ಎಂದು ರಾಜ್ಯಪಾಲರ ವಿರುದ್ಧ ಶಾಸಕ ಟಿ.ಡಿ.ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

Intro:Kn_Ckm_04_Rajegowda Garam_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕಾಂಗ್ರೇಸ್ ಶಾಸಕ ಟಿ ಡಿ ರಾಜೇಗೌಡ ರಾಜ್ಯಪಾಲರ ಮೇಲೆ ಚಿಕ್ಕಮಗಳೂರಿನಲ್ಲಿ ಗರಂ ಆಗಿದ್ದಾರೆ.ಬೊಮ್ಮಯಿ ಅವರ ಪ್ರಕರಣದ ಹಿನ್ನಲೆಯಲ್ಲಿ ರಾಜ್ಯಪಾಲರು ಒಬ್ಬರಿಗೆ ಮುಖ್ಯಮಂತ್ರಿ ಆಗಿ ಸರ್ಕಾರ ರಚನೆಗೆ ಅವಕಾಶ ಕಲ್ವಿಸುವ ವೇಳೆ ಅವರು ಶೇ 51 ಇರಬೇಕು.ಅದು ಪಟ್ಟಿ ಸಮೇತ ರಾಜ್ಯಪಾಲರಿಗೆ ತೋರಿಸಬೇಕು. ಅದು ಸಂವಿಧಾನ. ಸದನ ಪ್ರಾರಂಭ ಆದ ಮೇಲೆ ಯಾರು ಹೆಚ್ಚು ಮತ ಗಳಿಸುತ್ತಾರೆ ಅವರು ವಿಶ್ವಾಸ ಮತ ಗಳಿಸುತ್ತಾರೆ. ಅವರು ಮುಖ್ಯಮಂತ್ರಿ ಆಗುತ್ತಾರೆ. ಆದರೇ ರಾಜ್ಯಪಾಲರು ಯಡ್ಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗಲೂ ಅವಕಾಶ ಕೊಡಬೇಕಾದರೇ ಇವರಿಗೆ ಶೇ 51 ಮತ ಇದೆಯಾ ಎಂದೂ ಯೋಚನೆ ಮಾಡಬೇಕಿತ್ತು. ಈಗ ಅವರ ಅದೃಷ್ಟ ಅತೃಪ್ತರು ಅನರ್ಹತೆ ಆಗಿದ್ದಾರೆ. ಈಗ ಅವರಿಗೆ ಅವಕಾಶ ಇದೆ. ಇದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೇ ರಾಜೀನಾಮೆ ಅಂಗೀಕಾರ ಆಗುವುದಕ್ಕೆ ಮುಂಚೆ ಅಥವಾ ಅನರ್ಹತೆ ಆಗೋದಕ್ಕಿಂತ ಮೋದಲು ಮುಖ್ಯಮಂತ್ರಿ ಆಗಲು ಅವಕಾಶ ಮಾಡಿಕೊಟ್ಟಿರೋದು ರಾಜ್ಯಪಾಲರು ಸಂವಿಧಾನ ವಿರೋಧದ ನಿಲುವು ಇದು ನಮ್ಮಗೆ ನೋವಾಗಿದೆ. ಕಾನೂನು, ಪ್ರಜಾಪ್ರಭುತ್ವ, ಸಂವಿಧಾನ ಎತ್ತಿಹಿಡಿಯೋರೆ ಅದರ ವಿರುದ್ದ ನಡೆದುಕೊಂಡಾಗ ಏನಾಗುತ್ತದೆ ಎಂದೂ ರಾಜ್ಯ ಪಾಲರ ವಿರುದ್ದ ಶಾಸಕ ಟಿ ಡಿ ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು......

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.