ETV Bharat / state

ನೆಟ್​​ವರ್ಕ್​ ಸಮಸ್ಯೆ ಎಂದು ಹಳ್ಳಿಯನ್ನೇ ತೊರೆದ ಸಿರಿ: ಇದೇನಾ ಡಿಜಿಟಲ್​ ಇಂಡಿಯಾ?

ಚಿಕ್ಕಮಗಳೂರು ತಾಲೂಕಿನ ಗಾಳಿಗುಡ್ಡೆ ಗ್ರಾಮದ ವಿದ್ಯಾರ್ಥಿ ಸಿರಿ ಎಂಬುವವರು ಹಳ್ಳಿಯಲ್ಲಿ ಸರಿಯಾದ ನೆಟ್​​ವರ್ಕ್​ ಇಲ್ಲವೆಂದು, ತಮ್ಮ ಅಪ್ಪ ಅಮ್ಮನೊಂದಿಗೆ ಸಿಟಿಗೆ ಬಂದು ವಾಸ ಮಾಡುತ್ತಿದ್ದಾರೆ.

ಫೈನಲ್ ಇಯರ್ ಓದುತ್ತಿರುವ ಸಿರಿ
ಫೈನಲ್ ಇಯರ್ ಓದುತ್ತಿರುವ ಸಿರಿ
author img

By

Published : Sep 1, 2020, 6:58 PM IST

Updated : Sep 1, 2020, 7:08 PM IST

ಚಿಕ್ಕಮಗಳೂರು: ಜಿಲ್ಲೆಯ ಮುತ್ತೋಡಿ ಅರಣ್ಯದ ಆಸುಪಾಸಿನ ಗಾಳಿಗುಡ್ಡೆ ಗ್ರಾಮದ ಯುವತಿ ಸಿರಿ ಎಂಬುವರು, ಕೊರೊನಾ ಕಾಲಿಟ್ಟಾಗಿನಿಂದ ಹಳ್ಳಿಯನ್ನು ತೊರೆದು ಅಪ್ಪ-ಅಮ್ಮನ ಜೊತೆ ಚಿಕ್ಕಮಗಳೂರಲ್ಲಿ ಮನೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ನೆಟ್​ವರ್ಕ್​ ಸಮಸ್ಯೆ.

ಹೌದು, ಇವರು ಮೈಸೂರಿನಲ್ಲಿ ಫೈನಲ್ ಇಯರ್ ಓದುತ್ತಿದ್ದು, ನೆಟ್​ವರ್ಕ್​ ಸಮಸ್ಯೆಯಿಂದ ಆನ್‍ಲೈನ್ ಕ್ಲಾಸ್​ ಕೇಳಲು ಆಗುತ್ತಿರಲಿಲ್ಲ. ಇತ್ತ ಹಳ್ಳಿಯಲ್ಲಿ ಬೇಸಿಕ್ ಮೊಬೈಲ್‍ಗೂ ನೆಟ್​​ವರ್ಕ್​ ಇಲ್ಲ. ಇದರಿಂದ ಓದಿಗೆ ತೊಂದರೆಯಾಗುತ್ತದೆ ಎಂದು ಸಿರಿ ತಮ್ಮ ಅಪ್ಪ ಅಮ್ಮನೊಂದಿಗೆ ಹಳ್ಳಿಯನ್ನು ತೊರೆದು ಸಿಟಿಗೆ ಬಂದಿದ್ದಾರೆ.

ನೆಟ್​​ವರ್ಕ್​ ಸಮಸ್ಯೆ ಎಂದು ಹಳ್ಳಿಯನ್ನೇ ತೊರೆದ ಸಿರಿ

ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಇಂತಹ ಸಾವಿರಾರು ಹಳ್ಳಿಗಳಿವೆ. ಅವುಗಳಿಗೆ ಸರಿಯಾದ ರಸ್ತೆ, ಕರೆಂಟ್ ಕೂಡ ಇಲ್ಲ. ಅವರಿಗೆ ಮೂಲಭೂತ ಸೌಕರ್ಯಗಳಂತೂ ಮರೀಚಿಕೆಯಾಗಿದೆ. ಇದರ ಮಧ್ಯೆ ನೆಟ್​ವರ್ಕ್​ ಅಂತೂ ಕೇಳೋದೇ ಬೇಡ. ಹಾಗಾಗಿ ಮಲೆನಾಡಿಗರು ಹಳ್ಳಿ ಬಿಟ್ಟು ನಗರಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನಾದರೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಇಂತಹ ಸಮಸ್ಯೆಗಳನ್ನು ಬಗೆ ಹರಿಸಿದರೇ, ಇಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

Last Updated : Sep 1, 2020, 7:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.