ETV Bharat / state

ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು: ಸಿ ಟಿ ರವಿ - ct ravi about siddharamayya

ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು. ಸತ್ಯ ಮತ್ತು ಸಿದ್ದರಾಮಯ್ಯ ಎಣ್ಣೆ ಮತ್ತು ಸೀಗೆಕಾಯಿ ಇದ್ದಂತೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ct ravi
ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು
author img

By

Published : Jun 21, 2022, 2:04 PM IST

ಚಿಕ್ಕಮಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು. ಸತ್ಯ ಮತ್ತು ಸಿದ್ದರಾಮಯ್ಯ ಎಣ್ಣೆ ಮತ್ತು ಸೀಗೆಕಾಯಿ ಇದ್ದಂತೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೋದಿ, ಪ್ರವಾಹ ಸಮಯದಲ್ಲಿ ಬರಲಿಲ್ಲ, ಆಕ್ಸಿಜನ್ ಕೊಡಲಿಲ್ಲ, ಈಗ ಯೋಗಕ್ಕೆ ಬಂದಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದರು. ಇದರ ಬೆನ್ನಲ್ಲೇ ಸಿ.ಟಿ ರವಿ ಅವರು ನಗರದಲ್ಲಿಂದು ಮಾಧ್ಯದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ರೀತಿ ಸುಳ್ಳು ಹೇಳುವ ನಿಪುಣರು ಮತ್ತೊಬ್ಬರಿಲ್ಲ. ಸುಳ್ಳಿಗೆ ಪ್ರಶಸ್ತಿ ನೀಡುವುದಾದರೆ ಅದು ಸಿದ್ದರಾಮಯ್ಯ ಬಿಟ್ಟು ಬೇರ್ಯಾರಿಗೂ ಸಿಗಲ್ಲ. ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿದ್ದಂತಹ ಸಮಯದಲ್ಲಿ ಆಕ್ಸಿಜನ್ ಪ್ಲಾಂಟ್ ಹಾಕಿದ್ರಾ ಎಂದು ಪ್ರಶ್ನಿಸಿದರು. ಪ್ರತಿ ಆಸ್ಪತ್ರೆಗೂ ಆಕ್ಸಿಜನ್ ಪ್ಲಾಂಟ್ ಹಾಕಿದ್ದು ಪಿ ಎಂ ಕೇರ್ಸ್‍ನಲ್ಲಿ. ತ್ವರಿತ ನಿರ್ಧಾರದ ಕೈಗೊಂಡಿರುವ ಪರಿಣಾಮವಾಗಿ ಸಾವಿನ ಪ್ರಮಾಣ ಕಡಿಮೆಯಾಗಿದ್ದು, ಇಲ್ಲದಿದ್ದರೆ 10ಪಟ್ಟು ಹೆಚ್ಚಿರುತಿತ್ತು ಎಂದು ಟಾಂಗ್​ ಕೊಟ್ಟರು.

ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು

9 ತಿಂಗಳಲ್ಲಿ ಪ್ರತಿಯೊಬ್ಬರಿಗೂ ಎರಡು ಡೋಸ್​ ಲಸಿಕಿ ನೀಡಲಾಗಿತ್ತು. ಸಿದ್ದರಾಮಯ್ಯ ವ್ಯಾಕ್ಸಿನ್​ ಹಾಕಿಸಿಕೊಂಡಿಲ್ವಾ. ಲಸಿಕೆ ಸಿಗದಿದ್ದರೆ ಸಿದ್ದರಾಮಯ್ಯ ಅವರಿಗೆ ಇಂದು ಏನಾಗಿರುತಿತ್ತು ಎಂದು ಅವರೇ ಊಹೆ ಮಾಡಿಕೊಳ್ಳಲಿ ಎಂದು ಸಿ ಟಿ ರವಿ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಅಗ್ನಿಪಥ: 'ಮೊದಲು ನಮ್ಮ ವಾದ ಆಲಿಸಿ' - ಸುಪ್ರೀಂಗೆ ಕೇಂದ್ರದ ಅಹವಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.