ETV Bharat / state

ಚಿಕ್ಕಮಗಳೂರಲ್ಲಿ ಗುಂಡಿನ ದಾಳಿ.. ಬೈಕ್​ನಲ್ಲಿ ಹೋಗುತ್ತಿದ್ದವರ ಮೇಲೆ ಶೂಟೌಟ್​, ಇಬ್ಬರು ಸ್ಥಳದಲ್ಲೇ ಸಾವು - ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆ

ಶೂಟೌಟ್​ ಮಾಡಿರುವ ವಿಶೇಷಚೇತನ ಆಗಿರುವ ಆರೋಪಿಯನ್ನು ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Shootout on the bikers: Two died on the spot
ಬೈಕ್​ನಲ್ಲಿ ಹೋಗುತ್ತಿದ್ದವರ ಮೇಲೆ ಶೂಟೌಟ್​: ಇಬ್ಬರು ಸ್ಥಳದಲ್ಲೇ ಸಾವು
author img

By

Published : Feb 20, 2023, 1:34 PM IST

Updated : Feb 20, 2023, 2:56 PM IST

ಬೈಕ್​ನಲ್ಲಿ ಹೋಗುತ್ತಿದ್ದವರ ಮೇಲೆ ಶೂಟೌಟ್

ಚಿಕ್ಕಮಗಳೂರು: ಬೈಕ್​ನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಶೂಟೌಟ್ ನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಬಿದರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೈಕಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಳ್ಳಿಬೈಲು ಗ್ರಾಮದ ನಿವಾಸಿಗಳಾದ ಪ್ರಕಾಶ್ (28) ಪ್ರವೀಣ್ (30) ಸ್ಥಳದಲ್ಲಿ ಸಾವನಪ್ಪಿದ್ದು, ರಮೇಶ್ ಎಂಬಾತದಿಂದ ಶೂಟೌಟ್ ನಡೆದಿದೆ.

ಫೈರಿಂಗ್ ಮಾಡಿದಾತ ವಿಶೇಷಚೇತನ ಎಂದು ಹೇಳಲಾಗುತ್ತಿದ್ದು, ಆರೋಪಿಯನ್ನು ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಮೃತ ದೇಹಗಳನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: ನಿಕ್ಕಿ ಯಾದವ್​ ಹತ್ಯೆ ಪ್ರಕರಣ: ವಿವಾಹ ಸಾಕ್ಷಿ ಪಡೆಯಲು ಆರೋಪಿಯೊಂದಿಗೆ ಆರ್ಯ ಸಮಾಜ ಮಂದಿರಕ್ಕೆ ತೆರಳಿದ್ದ ಪೊಲೀಸರು

Last Updated : Feb 20, 2023, 2:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.