ETV Bharat / state

ದತ್ತ ಜಯಂತಿ: ಶೋಭಾಯಾತ್ರೆಯಲ್ಲಿ ಕೇಂದ್ರ ಸಚಿವೆ ಕರಂದ್ಲಾಜೆ, ಸಿ.ಟಿ ರವಿ ಡ್ಯಾನ್ಸ್​ - ​ ETV Bharat Karnataka

ದತ್ತ ಜಯಂತಿ ಪ್ರಯುಕ್ತ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಶೋಭಾ ಯಾತ್ರೆ ನಡೆಸಲಾಗುತ್ತಿದೆ.

ಕುಣಿದು ಕುಪ್ಪಳಿಸಿದ ಶೋಭಾ ಕರಂದ್ಲಾಜೆ, ಸಿ.ಟಿ ರವಿ

author img

By ETV Bharat Karnataka Team

Published : Dec 24, 2023, 8:06 AM IST

ಚಿಕ್ಕಮಗಳೂರು : ತಾಲೂಕಿನ ಆಲ್ದೂರು ಪಟ್ಟಣದಲ್ಲಿ ಶನಿವಾರ ನಡೆದ ದತ್ತ ಜಯಂತಿ ಶೋಭಾ ಯಾತ್ರೆಯಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಸಚಿವ ಸಿ.ಟಿ ರವಿ ಕುಣಿದು ಕುಪ್ಪಳಿಸಿದ್ದಾರೆ. ಕೈಯಲ್ಲಿ ಕೇಸರಿ ಧ್ವಜ ಹಿಡಿದು ಶೋಭಾ ಕರಂದ್ಲಾಜೆ ಅವರು ಡಿಜೆ ಹಾಡಿಗೆ ಹೆಜ್ಜೆಹಾಕಿದ್ದು, ಸಿ.ಟಿ ರವಿ ಕೂಡ ಜೊತೆಗಿದ್ದರು.

ಅಲ್ಲದೆ, ಶೋಭಾ ಯಾತ್ರೆಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು, ದತ್ತ ಮಾಲಾಧಾರಿಗಳು ನೃತ್ಯ ಮಾಡಿದರು. ಇದೇ ವೇಳೆ ರಸ್ತೆಯುದ್ದಕ್ಕೂ ಜೈ ಶ್ರೀ ರಾಮ್ ಹಾಗೂ ಜೈ ದತ್ತಾತ್ರೇಯ ಎಂಬ ಘೋಷಣೆ ಮೊಳಗಿದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಆಲ್ದೂರು ಪಟ್ಟಣದಲ್ಲಿ ಪೊಲೀಸ್ ಬಿಗಿ ಭದ್ರತೆ‌ ಕಲ್ಪಿಸಲಾಗಿದ್ದು, ಭದ್ರತೆಗಾಗಿ 500ಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಅದ್ಧೂರಿಯಾಗಿ ದತ್ತ ಜಯಂತಿ ಆಚರಣೆ ಮಾಡಲಾಗುತ್ತಿದೆ. ಡಿಸೆಂಬರ್ 24 ರಂದು ನಗರದ ಪ್ರಮುಖ ಬೀದಿಗಳಲ್ಲಿ ಮಹಿಳೆಯರಿಂದ ಅನಸೂಯ ಜಯಂತಿ ಆಚರಣೆ ಮಾಡುವುದರ ಮೂಲಕ ಸಂಕೀರ್ತನೆ ಯಾತ್ರೆ ನಡೆಯಲಿದೆ. ಡಿಸೆಂಬರ್ 25ರಂದು ನಗರದಲ್ಲಿ ಬೃಹತ್ ಶೋಭಾಯತ್ರೆ ನಡೆಯಲಿದೆ. ಈ ಶೋಭಾಯಾತ್ರೆಯಲ್ಲಿ 25,000 ಕ್ಕೂ ಅಧಿಕ ಜನ ಮಾಲಾಧಾರಿಗಳು ಭಾಗವಹಿಸುವ ಸಾಧ್ಯತೆ ಇದೆ. ಡಿಸೆಂಬರ್ 26 ರಂದು ರಾಜ್ಯದ ಮೂಲೆ- ಮೂಲೆಯಿಂದ ಬರುವ ಮಾಲಾಧಾರಿಗಳು ದತ್ತ ಪೀಠಕ್ಕೆ ತೆರಳಿ, ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ.

ಇದನ್ನೂ ಓದಿ : ದತ್ತ ಜಯಂತಿ: ಮೂಡಿಗೆರೆಯಲ್ಲಿ ಬೃಹತ್ ಶೋಭಾಯಾತ್ರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.