ಚಿಕ್ಕಮಗಳೂರು: ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಿಭಿನ್ನ ತೀರ್ಪು ನೀಡಿದೆ. ಇಬ್ಬರು ನ್ಯಾಯಾಧೀಶರು ಬೇರೆ ಬೇರೆ ತೀರ್ಪು ನೀಡಿದ್ದರಿಂದ ಈ ಪ್ರಕರಣ ಈಗ ಮೇಲ್ಮನವಿಗೆ ಹೋಗಿದೆ. ಹೈಕೋರ್ಟ್ ತೀರ್ಮಾನವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ನಗರದಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಗೌಸ್ ಮುನಿರ್ ಹೇಳಿದ್ದಾರೆ.
ಇದೆ ವೇಳೆ, ಶಾಸಕ ಸಿ.ಟಿ ರವಿ ಮೇಲೆ ವಾಗ್ದಾಳಿ ನಡೆಸಿ, ಹಿಜಾಬ್ ಹಾಕುವುದರಿಂದ ಮತಾಂಧತೆ ಹಾಗೂ ಆತಂಕ ಹೆಚ್ಚು ಎಂದು ಸಿ.ಟಿ ರವಿ ಹೇಳುತ್ತಾರೆ. ಕೋರ್ಟ್ ನೀಡುವ ತೀರ್ಪು ಇವರಲ್ಲಿ ಆತಂಕ ಎಂದು ಹೇಳುತ್ತಿದ್ದಾರೆ. ಇವರೇ ಗಲಭೆಕೋರರು ಹಾಗೂ ಆತಂಕವಾದಿಗಳು. ಹೆಣ್ಣು ಮಕ್ಕಳು ಹಿಜಾಬ್ ಧರಿಸುವುದರಿಂದ ದೇಶಕ್ಕೆ ಆತಂಕ ಇದ್ಯಾ?. ನಮ್ಮ ಪೊಲೀಸ್ ಇಲಾಖೆ ಅಷ್ಟು ವೀಕ್ ಆಗಿದ್ಯಾ?. ಎಂದು ಪ್ರಶ್ನಿಸಿದರು.
ಪೊಲೀಸರ ನೈತಿಕ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಸಿ.ಟಿ ರವಿ ಮಾಡುತ್ತಿದ್ದಾರೆ. ಈಗ ಆತಂಕವಾದಿಗಳು ಮತ್ತು ಗಲಭೆ ಕೋರರೇ ದೇಶದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಎಲ್ಲ ವಿಚಾರದಲ್ಲೂ ಹಿಂದೂ - ಮುಸ್ಲಿಂ ಎಂದು ಹೇಳಿ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ರವಿ ಅವರೇ ನೀವು ಅಭಿವೃದ್ಧಿ ಕೆಲಸಗಳನ್ನು ಇಟ್ಟುಕೊಂಡು ಚುನಾವಣೆಗೆ ಹೋಗಿ. ಹಿಂದೂ ಮುಸ್ಲಿಂ ಎಂಬ ಮಾನಸಿಕತೆಯಿಂದ ಹೊರ ಬನ್ನಿ ಎಂದು ಗೌಸ್ ಮುನೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೈಕೋರ್ಟ್ ಆದೇಶ ರದ್ದಾಗದ ಕಾರಣ ಹಿಜಾಬ್ ಧರಿಸಲು ಅವಕಾಶವಿಲ್ಲ: ಶಾಸಕ ರಘುಪತಿ ಭಟ್