ಚಿಕ್ಕಮಗಳೂರು: ನಟ ಸಂಚಾರಿ ವಿಜಯ್ ಸಾವನ್ನಪ್ಪಿ ಇದೇ ಜೂನ್ 14ಕ್ಕೆ ಒಂದು ವರ್ಷ ಆಗಲಿದೆ. ಬೈಕ್ ಅಪಘಾತದಲ್ಲಿ ಇಹಲೋಕ ತ್ಯಜಿಸಿದ ಸಂಚಾರಿ ವಿಜಯ್ ಅಭಿನಯಿಸಿರುವ ಸಿನಿಮಾಗಳು ಹಾಗು ಬದುಕಿದ್ದಷ್ಟು ದಿನ ಮಾಡಿದ ಸಮಾಜ ಸೇವೆ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಸಿನಿಮಾ, ರಂಗಭೂಮಿ ಮಾತ್ರವಲ್ಲದೇ ಸಮಾಜ ಸೇವೆಯಲ್ಲೂ ವಿಜಯ್ ಮುಂದೆ ಇದ್ದರು. ಇಂತಹ ಪ್ರತಿಭಾವಂತ ನಟ ಇಹಲೋಕ ತ್ಯಜಿಸಿ ಒಂದು ವರ್ಷವಾಗುತ್ತಿದ್ದು, ಕುಟುಂಬಸ್ಥರು, ಸ್ನೇಹಿತರು ಇಂದು ಮೊದಲನೇ ವರ್ಷದ ಪುಣ್ಯಸ್ಮರಣೆ ಮಾಡಿದ್ದಾರೆ.
ಸಂಚಾರಿ ವಿಜಯ್ ಸಹೋದರರಾದ ಬಿ.ವಿರೂಪಾಕ್ಷ ಮತ್ತು ಸಿದ್ದೇಶಕುಮಾರ್ ಹಾಗೂ ಸ್ನೇಹಿತರು ಸೇರಿಕೊಂಡು ಸಂಚಾರಿ ವಿಜಯ್ ನೆನಪಿಗಾಗಿ ಅವರ ಹುಟ್ಟೂರಿನಲ್ಲಿ ಪುತ್ಥಳಿಯೊಂದನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಇಂದು ಪುತ್ಥಳಿಯ ಅನಾವರಣ ಮಾಡಿ ಪೂಜೆ ಸಲ್ಲಿಸಿದರು. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯ ತೋಟದಲ್ಲಿ ವಿಜಯ್ ಸಹೋದರರು ಈ ಪುತ್ಥಳಿಯನ್ನು ತಯಾರಿಸಿ, ಒಂದು ವಾರ ಮುಂಚಿತವಾಗಿ ಪುಣ್ಯತಿಥಿ ನೆರವೇರಿಸಿದರು.

ಇದನ್ನೂ ಓದಿ: ಹಿರಿಯ ನಟ ದಿ.ನರಸಿಂಹರಾಜು ಹಿರಿಯ ಪುತ್ರಿ ಧರ್ಮವತಿ ಹೃದಯಾಘಾತದಿಂದ ನಿಧನ
ಈ ಪುಣ್ಯಸ್ಮರಣೆಯಲ್ಲಿ ಸಂಚಾರಿ ವಿಜಯ್ ಆಪ್ತ ಸ್ನೇಹಿತರಾದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ, ಸಂಭಾಷಣೆಕಾರ ವಿರೂ ಮಲ್ಲಣ್ಣ, ವಿಜಯ್ ಕುಟುಂಬ ವರ್ಗದವರು ಮತ್ತು ಸ್ನೇಹಿತರು ಭಾಗವಹಿಸಿದ್ದರು.