ETV Bharat / state

ಆರ್​ಎಸ್​ಎಸ್ ಒಂದು ದೇಶ ಭಕ್ತ ಸಂಘಟನೆ: ಸಿ.ಟಿ.ರವಿ - BJP national general secretary CT Ravi

ಆರ್​ಎಸ್​ಎಸ್ ಸಂಘಟನೆ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅದು ಒಂದು ದೇಶ ಭಕ್ತ ಸಂಘಟನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

Chikkamagalur
ಸಿ.ಟಿ ರವಿ
author img

By

Published : Nov 17, 2020, 3:46 PM IST

ಚಿಕ್ಕಮಗಳೂರು: ಆರ್​ಎಸ್​ಎಸ್ ಒಂದು ದೇಶ ಭಕ್ತ ಸಂಘಟನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

ಸಿದ್ದರಾಮಯ್ಯ ಅವರಿಗೆ ಪ್ರತಿಕ್ರಿಯೆ ನೀಡುವ ಪುರುಸೊತ್ತು ಸಂಘಟನೆಗೆ ಇಲ್ಲ. ಸಂಘಟನೆ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಇಷ್ಟು ವರ್ಷ ಸಿದ್ದರಾಮಯ್ಯ ಸಾರ್ವಜನಿಕ ಜೀವನದಲ್ಲಿದ್ದೋರು. ಅವರಿಗೆ ಪಿಎಫ್​ಐ ಮೇಲೆ ಪ್ರೀತಿ ಬರುತ್ತೆ, ಎಸ್​ಡಿಪಿಐ ಮೇಲೆ ಪ್ರೀತಿ ಬರುತ್ತೆ, ಮುಸ್ಲಿಂ ಲೀಗ್ ಮೇಲೆ ಪ್ರೀತಿ ಬರುತ್ತೆ. ಅವರೆಲ್ಲರೂ ಇವರಿಗೆ ಜಾತ್ಯಾತೀತರಾಗಿ ಕಾಣುತ್ತಾರೆ. ಆದರೆ ಆರ್​ಎಸ್​ಎಸ್ ಬಗ್ಗೆ ದ್ವೇಷ ಇಟ್ಟುಕೊಂಡಿದ್ದಾರೆ.

ಅವರು ಆರ್​ಎಸ್​ಎಸ್​ಅನ್ನು ಅರ್ಥ ಮಾಡಿಕೊಂಡಿಲ್ಲ. ಅರ್ಥ ಮಾಡಿಕೊಳ್ಳಬೇಕಾದರೆ ಶಾಖೆಗೆ ಬರಬೇಕು. ಅಲ್ಲಿ ಕಲಿಸುವ ದೇಶ ಭಕ್ತಿಯ ಪಾಠ ಅರ್ಥ ಆಗುತ್ತದೆ. ಆರ್​ಎಸ್​ಎಸ್ ಮೇಲೆ ದ್ವೇಷ ಕಾರಿದರೆ ಕಾಂಗ್ರೆಸ್​​ನಲ್ಲಿ ಪ್ರಮೋಷನ್ ಸಿಗುತ್ತದೆ ಎಂಬ ಮನಸ್ಥಿತಿ ಇದೆ. ಆದರೆ ಆರ್​ಎಸ್​ಎಸ್ ಯಾರನ್ನೂ ದ್ವೇಷಿಸೋದಿಲ್ಲ. ಅದು ದೇಶ ಭಕ್ತಿ ಸಂಘಟನೆ. ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ಅವರು ಆರ್​ಎಸ್​ಎಸ್ ಬಗ್ಗೆ ಅರ್ಥ ಮಾಡಿಕೊಂಡಿಲ್ಲ ಎಂದರೆ ಅವರು ಸಾರ್ವಜನಿಕ ಜೀವನದಲ್ಲಿ ಇರಲೂ ಲಾಯಕ್​ ಅಲ್ಲ ಎಂದು ಕಿಡಿಕಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.