ಚಿಕ್ಕಮಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸಮಲತಾ ಗೆಲುವಿಗಾಗಿ ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಸಹಜವಾಗಿ ಸಮಲತಾ ಗೆಲುವಿನ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಮಂಡ್ಯ ಕ್ಷೇತ್ರದ ಜನರು ಸೇರಿದಂತೆ ಇತರೆ ಜನರು ಕೂಡ ಸಮಲತಾ ಜಯ ಸಾಧಿಸಲಿ ಎಂದು ಹೇಳುತ್ತಿದ್ದಾರೆ. ಇವರ ಆಶೀರ್ವಾದವೇ ಸಮಲತಾ ಗೆಲುವಿಗೆ ವರವಾಗಲಿದೆ. ತಾಯಿ ಅನ್ನಪೂಣೇಶ್ವರಿ ದೇವಿಯಲ್ಲಿ ಸಮಲತಾ ಗೆಲುವಿಗೆ ಪ್ರಾರ್ಥನೆ ಮಾಡಿದ್ದೇನೆ. ಒಂದು ವೇಳೆ ದೇಶದಲ್ಲಿ ಅತಂತ್ರ ಪರಿಸ್ಥಿತಿ ಎದುರಾದರೆ ಜನರ ತೀರ್ಮಾನದಂತೆ ಸಮಲತಾ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವೆಂಕಟೇಶ್ ಹೇಳಿದ್ದಾರೆ.
ಇನ್ನು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಎದುರಾದ ಟೈಟಲ್ಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಜೋಡೆತ್ತು, ನಿಖಿಲ್ ಎಲ್ಲಿದ್ದೀಯಾಪ್ಪ ಎನ್ನುವ ಟೈಟಲ್ಗಳಿಂದ ಸಿನಿಮಾ ಹೋಗುವುದಿಲ್ಲ. ಟೈಟಲ್ನಿಂದ ಸಿನಿಮಾ ಓಡುತ್ತೆ ಎನ್ನುವುದು ತಪ್ಪು ಕಲ್ಪನೆ. ಸಿನಿಮಾಕ್ಕೆ ಕಥೆ, ನಾಯಕ ಮುಖ್ಯ ಎಂದು ನಟ-ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹೊರನಾಡು ಅನ್ನಪೂಣೇಶ್ವರಿ ದೇವಾಲಯದಲ್ಲಿ ಹೇಳಿದರು.