ಚಿಕ್ಕಮಗಳೂರು: ಇಂದು ಜಿಲ್ಲೆಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿದ್ದರು. ಈ ವೇಳೆ ಜಿಲ್ಲಾ ಪೊಲೀಸ್ ಇಲಾಖೆ ಸಚಿವರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿತ್ತು. ಪರಿಣಾಮ, ನಗರದ ಕೆಲವೆಡೆ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.
ಪರೀಕ್ಷೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಸಂಚಾರ ದಟ್ಟನೆಯಿಂದ ತೊಂದರೆ ಅನುಭವಿಸಿದರು.
ತೊಗರಿಹಂಕಲ್ ಸರ್ಕಲ್ ಹಾಗೂ ಎನ್ಎಂಸಿ ವೃತ್ತದಲ್ಲೂ ಇದೇ ಸಮಸ್ಯೆ ಉಂಟಾಗಿದ್ದು, ವಾಹನ ಸವಾರರು ಕೆಲ ಸಮಯ ನಿಂತಲ್ಲಿಯೇ ನಿಲ್ಲುವಂತಾಗಿತ್ತು.