ETV Bharat / state

ಚಿಕ್ಕಮಗಳೂರಲ್ಲಿ ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವ ಶ್ರೀರಾಮುಲು ಚರ್ಚೆ - mandya news

ಚಿಕ್ಕಮಗಳೂರಿನಲ್ಲಿ ಸದ್ಯ ಒಂದೂ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಅಲ್ಲದೇ ಗ್ರೀನ್​ ಝೋನ್​ನಲ್ಲಿಯೇ ಇದ್ದು, ಜನತೆ ಕೊರೊನಾ ಆತಂಕದಿಂದ ದೂರವಿದೆ. ಈ ಕುರಿತು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಕೊರೊನಾ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

Ramulu talks with the authorities in Chikkamagaluru about corona situation
ಗ್ರೀನ್​ ಝೋನ್​​ನಲ್ಲಿರುವ ಚಿಕ್ಕಮಗಳೂರಲ್ಲಿ ಅಧಿಕಾರಿಗಳೊಂದಿಗೆ ರಾಮುಲು ಚರ್ಚೆ
author img

By

Published : May 1, 2020, 10:39 PM IST

ಚಿಕ್ಕಮಗಳೂರು: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆರೋಗ್ಯ ಸಚಿವ ಶ್ರೀ ರಾಮುಲು ನೇತೃತ್ವದಲ್ಲಿ ಅಧಿಕಾರಿಗಳ ಜೊತೆ ಕೋವಿಡ್-19 ವೈರಸ್ ತಡೆಗಟ್ಟುವ ವಿಚಾರವಾಗಿ ಸಭೆ ನಡೆಯಿತು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆ ಗ್ರೀನ್ ಝೋನ್​ನಲ್ಲಿದೆ. ರಾಜ್ಯದಲ್ಲಿ 589 ಜನರು ಪಾಸಿಟಿವ್ ಕೇಸ್ ಇದ್ದು, 235 ಗುಣಮುಖರಾಗಿದ್ದಾರೆ, 23 ಜನರು ಸಾವನ್ನಪ್ಪಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೇ ನಮ್ಮ ರಾಜ್ಯ ಉತ್ತಮವಾಗಿದೆ ಎಂದಿದ್ದಾರೆ.

ಸರ್ಕಾರ ನೀಡಿರುವ ಸಲಹೆ ಸೂಚನೆ ಪಾಲಿಸಿಕೊಂಡು ಬರಬೇಕಿದೆ. ಯಾರು ಮಾಸ್ಕ್ ಹಾಕುವುದಿಲ್ಲವೋ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲ್ಲ ಆ ಸಂದರ್ಭದಲ್ಲಿ ತುಂಬಾ ತೊಂದರೆ ಎದುರಿಸಬೇಕಾಗುತ್ತದೆ. ಈ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದರು.

ಇದಲ್ಲದೇ ಮುಂಬೈನಲ್ಲಿ 23ಕ್ಕೆ ಒಬ್ಬ ವ್ಯಕ್ತಿ ಹೃದಯಾಘಾತದಿಂದ ಸಾವನಪ್ಪಿದ್ದರು. ನಂತರ ಆ್ಯಂಬುಲೆನ್ಸ್​​ನ ಮೂಲಕ ಮಂಡ್ಯದ ಪಾಂಡವಪುರಕ್ಕೆ ತರಲಾಗಿದೆ. ಆ್ಯಂಬುಲೆನ್ಸ್​​ನಲ್ಲಿ ಅವರ ಹೆಂಡತಿ, ಮಕ್ಕಳು, ಮಗ, ಮೊಮ್ಮಕ್ಕಳು ಇದ್ದರು. ಈ ಪ್ರಕರಣದಲ್ಲಿ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಪಾಸಿಟಿವ್ ಬಂದಿದೆ. ಈಗಾಗಲೇ ಅವರಿಗೆ ಚಿಕಿತ್ಸೆ ಸಹ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.