ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿಘಾಟಿ, ಕೊಟ್ಟಿಗೆಹಾರದ ಭಾಗಗಳಲ್ಲಿ ಮಳೆ ನಿರಂತರವಾಗಿ ಸುರಿಯಲು ಪ್ರಾರಂಭಿಸಿದೆ.
ಮುಂಗಾರು ಮಳೆ ಪ್ರವೇಶ ಮಾಡಿದ ದಿನದಿಂದ ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯಲು ಪ್ರಾರಂಭಿಸಿದೆ. ಇದರ ಪರಿಣಾಮ ನಗರ ಪ್ರದೇಶಕ್ಕೆ ವ್ಯಾಪಾರ,ವಹಿವಾಟಿಗೆ ಬರುವ ವಾಹನ ಸವಾರರಿಗೆ ಸ್ವಲ್ಪ ಮಟ್ಟಿನ ಪರದಾಟ ಎದುರಾಗಿದೆ.
ಆಗಿಂದಾಗ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಭೂಮಿ ಹದವಾಗಿದೆ. ಕೃಷಿ ಚಟುವಟಿಕೆಗಳು ಭರದಿಂದ ಸಾಗಿವೆ. ಅಲ್ಲದೇ ಕೆಲವೆಡೆ ವರುಣನ ಆರ್ಭಟದಿಂದಾಗಿ ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ ಎದುರಾಗಿದೆ.