ಚಿಕ್ಕಮಗಳೂರು : ಕಾಡು ಮೊಲ ನುಂಗಿ ಕಾಫಿ ಗಿಡದ ಬುಡದಲ್ಲಿ ನಿದ್ದೆ ಹೊಡೆಯುತ್ತಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಗಾಂಧಿ ಹಳ್ಳಿ ಕಾಫಿ ಎಸ್ವೇಟ್ ನಲ್ಲಿ ಸುಮಾರು 8 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು, ಕಾಡು ಮೊಲವನ್ನು ನುಂಗಿ ಕಾಫಿ ಗಿಡದ ಬುಡದಲ್ಲಿ ನಿದ್ದೆ ಮಾಡುತ್ತಿತ್ತು. ಈ ವೇಳೆ, ಕಾಫಿ ತೋಟದ ಕಾರ್ಮಿಕರು ಈ ಹೆಬ್ಬಾವು ನೋಡಿ ಬೆಚ್ಚಿ ಬಿದ್ದಿದ್ದಾರೆ.
ಕೂಡಲೇ ತೋಟದ ಮಾಲೀಕ ರಾಮಕೃಷ್ಣ ಪುರಾಣಿಕ್ ಅವರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೇ ಬಂದು ಹೆಬ್ಬಾವು ನೋಡಿದ ತೋಟದ ಮಾಲೀಕರು, ಕಳಸದ ಉರಗ ತಜ್ಞ ರಫಿಕ್ ಅವರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ರಫಿಕ್ ಅವರು ಸತತ 30 ನಿಮಿಷಗಳ ಕಾಲ ಕಾರ್ಯಾಚರಣೆ ಮಾಡಿ ಈ ಬೃಹತ್ ಗಾತ್ರದ ಹೆಬ್ಬಾವು ಸೆರೆ ಹಿಡಿದರು. ನಂತರ ಕುದುರೆ ಮುಖದ ಅರಣ್ಯ ಪ್ರದೇಶಕ್ಕೆ ಈ ಹೆಬ್ಬಾವು ಬಿಟ್ಟು ಬಂದರು.