ETV Bharat / state

ಮೈಕ್ರೋ ಫೈನಾನ್ಸ್​ಗಳ ವಿರುದ್ಧ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ - Protest in Chikmagalur

ಮೈಕ್ರೋ ಫೈನಾನ್ಸ್​ಗಳ ವಿರುದ್ದ ಜಿಲ್ಲಾ ಋಣ ಮುಕ್ತ ಹೋರಾಟ ಸಮಿತಿ ವತಿಯಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮೈಕ್ರೋ ಫೈನಾನ್ಸ್​ಗಳ ವಿರುದ್ಧ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ
author img

By

Published : Nov 17, 2019, 9:42 AM IST

ಚಿಕ್ಕಮಗಳೂರು: ಮೈಕ್ರೋ ಫೈನಾನ್ಸ್ ಹಾವಳಿ ವಿರುದ್ದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು. ಜಿಲ್ಲಾ ಋಣ ಮುಕ್ತ ಹೋರಾಟ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.

ಎಲ್ ಆ್ಯಂಡ್ ಟಿ, ಮುತ್ತೂಟ್, ಎಸ್​ಕೆಎಸ್, ಸಮಸ್ತ, ಗ್ರಾಮೀಣ ಕೂಟ, ಸ್ಪಂದನ ಸ್ಪೂರ್ತಿ, ಆಶೀರ್ವಾದ ಭಾರತ್, ಆಕ್ಸಿಸ್ ಸೇರಿದಂತೆ ಹಲವಾರು ಖಾಸಗಿ ಫೈನಾನ್ಸ್​ಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಫೈನಾನ್ಸ್​ಗಳು ಹಳ್ಳಿಯ ಬಡ ಮಹಿಳೆಯರನ್ನು ಗುರಿಯಾಗಿಸಿಕೊಂಡು ದುಬಾರಿ ಬಡ್ಡಿಯಲ್ಲಿ ಆಧಾರ ರಹಿತವಾಗಿ ಸಾಲವನ್ನು ಕೊಡುತ್ತಾ ಬಂದಿವೆ. ನಂತರದಲ್ಲಿ ಅವರಿಂದ ಹಣ ಸುಲಿಗೆ ಮಾಡುತ್ತಿವೆ ಎಂದು ಆರೋಪಿಸಿದರು.

ಮೈಕ್ರೋ ಫೈನಾನ್ಸ್​ಗಳ ವಿರುದ್ಧ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ

ಈ ಸಂಸ್ಥೆಗಳು ಬಡವರಿಗೆ ಹಣ ನೀಡುತ್ತೇವೆಂದು ರಾಷ್ಟ್ರೀಕೃತ ಬ್ಯಾಂಕುಗಳಿಂದ ಶೇ.11 ಹಾಗೂ ನಬಾರ್ಡ್​ನಿಂದ ಶೇ.4 ರಷ್ಟು ಬಡ್ಡಿ ದರದಲ್ಲಿ ಸಾಲ ಪಡೆಯುತ್ತವೆ. ಆದರೆ ಜನರಿಗೆ ಶೇ.20 ರಿಂದ ಶೇ.31ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಿ, ಪ್ರತಿ ವಾರ ಅವರಿಂದ ಬಲತ್ಕಾದಿಂದ ಹಣ ವಸೂಲಿ ಮಾಡುತ್ತಿವೆ. ರಾತ್ರಿ ಹಗಲು ಎನ್ನದೇ ಬಂದು ಹಣ ವಸೂಲಿ ಮಾಡುತ್ತಿದ್ದು, ಮಹಿಳೆಯರನ್ನು ಅವ್ಯಾಚ ಶಬ್ದಗಳಿಂದ ಸಿಬ್ಬಂದಿ ನಿಂದಿಸುತ್ತಿದ್ದಾರೆ ಎಂದು ಆರೋಪಿಸಿದರು. ಅವರ ವಿರುದ್ಧ ಯಾರು ಮಾತನಾಡುತ್ತಿಲ್ಲ. ನಮ್ಮ ರಕ್ಷಣೆಗೆ ಯಾರು ಇಲ್ಲದಂತಾಗಿದ್ದು, ಕೂಡಲೇ ಖಾಸಗಿ ಫೈನಾನ್ಸ್​ಗಳಿಂದ ಸರ್ಕಾರ ಮುಕ್ತಿ ಕೊಡಿಸಬೇಕು ಎಂದು ಆಗ್ರಹಿಸಿದರು.

Intro:Kn_Ckm_03_Protest_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ನಗರದಲ್ಲಿ ಜಿಲ್ಲಾ ಋಣ ಮುಕ್ತ ಹೋರಾಟ ಸಮಿತಿ ವತಿಯಿಂದಾ ಮೈಕ್ರೋ ಫೈನಾನ್ಸ್ ಹಾವಳಿ ವಿರುದ್ದ ಪ್ರತಿಭಟನೆಯನ್ನು ನಡೆಸಿದ್ದಾರೆ.ಈ ಪ್ರತಿಭಟನೆಯಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿದ್ದು ಜಿಲ್ಲೆಯಲ್ಲಿ ಎಲ್ ಅಂಡ್ ಟಿ, ಮುತ್ತೂಟ್, ಎಸ್ ಕೆ ಎಸ್, ಸಮಸ್ತ, ಗ್ರಾಮೀಣ ಕೂಟ, ಸ್ವಂದನ ಸ್ವೂರ್ತಿ, ಆಶೀರ್ವಾದ ಭಾರತ್, ಆಕ್ಸಿಸ್, ಇನ್ನು ಹಲವಾರು ಖಾಸಗೀ ಫೈನಾನ್ಸ್ ಗಳು ಹಳ್ಳಿಯ ಬಡ ಜನತೆಯೆ ಮನೆ ಮನೆಗಳಿಗೆ ತೆರಳಿ ಬಡ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ದುಬಾರಿ ಬಡ್ಡಿಯಲ್ಲಿ ಆಧಾರ ರಹಿತವಾಗಿ ಕೈ ಸಾಲದ ರೂಪದಲ್ಲಿ ಈ ಸಾಲಗಳನ್ನು ನೀಡುತ್ತಾ ಬಂದಿದ್ದು ಬಡ ಜನರನ್ನು ಸುಲಿಗೆ ಮಾಡುತ್ತಿವೆ. ಈ ಸಂಸ್ಥೆಗಳು ರಾಷ್ಟ್ರೀಕೃತ ಬ್ಯಾಂಕುಗಳಿಂದಲೂ ಶೇ 11 ಬಡ್ಡಿ ದರದಲ್ಲಿ ನಬಾರ್ಡ್ ನಿಂದಾ ಶೇ 4 ಬಡ್ಡಿ ದರದಲ್ಲಿ ಬಡವರ ನೆರವಿಗೆ ಎಂದೂ ಸಾಲ ಪಡೆದು ಬಡ ಮಹಿಳೆಯರಿಗೆ ಶೇ 20 ರಿಂ ಶೇ 31 ರ ವರೆಗೂ ಸಾಲ ನೀಡಿ ನಂತರ ಪ್ರತಿ ವಾರ ಅವರಿಂದ ಬಲತ್ಕಾರದ ವಸೂಲಿ ಮಾಡುತ್ತಿದ್ದು ಫೈನಾನ್ಸ್ ಗಳ ಸಿಬ್ಬಂದಿಗಲು ರಾತ್ರಿ - ಹಗಲು ಎನ್ನದೇ ಬಡ ಮಹಿಳೆಯರ ಮನೆಗೂ ಬಂದೂ ವಸೂಲಿ ಮಾಡುತ್ತಿದ್ದಾರೆ. ಬಡ ಮಹಿಳೆಯರನ್ನೂ ಅವ್ಯಾಚ ಶಬ್ದಗಳಿಂದಾ ನಿಂದಿಸುತ್ತಿದ್ದು ಅವಮಾನ ಮಾಡುತ್ತಿದ್ದಾರೆ ಎಂದೂ ಆರೋಪಿಸಿ ಇವರ ವಿರುದ್ದ ಯಾರೂ ಮಾತನಾಡುತ್ತಿಲ್ಲ ನಮ್ಮ ರಕ್ಷಣೆಗೆ ಯಾರೂ ಇಲ್ಲ ಎಂದೂ ಆರೋಪಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ಮಾಡಿ ಕೂಡಲೇ ಖಾಸಗೀ ಫೈನಾನ್ಸ್ ಗಳಿಂದಾ ಸರ್ಕಾರ ಕೂಡಲೇ ಮುಕ್ತಿ ಕೊಡಿಸಬೇಕು ಎಂದೂ ಆಗ್ರಹಿಸಿ ಪ್ರತಿಭಟನೆ ನಡೆಸಿದರು....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.