ETV Bharat / state

ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನ ರದ್ದು ಮಾಡಿ: ಕೇಂದ್ರದ ವಿರುದ್ಧ ಬೃಹತ್ ಪ್ರತಿಭಟನೆ - ಕೇಂದ್ರದ ವಿರುದ್ಧ ಕನ್ನಡ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ.

ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಕೆಲ ರಾಜಕೀಯ ಪಕ್ಷಗಳು ಸೇರಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ್ದು,ನಗರದ ತಾಲೂಕ್ ಆಫೀಸ್ ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೂ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ವಿರುದ್ಧ ಕನ್ನಡ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ.
author img

By

Published : Nov 6, 2019, 10:39 PM IST

ಚಿಕ್ಕಮಗಳೂರು: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ಹೇಗೆ ಐತಿಹಾಸಿಕ ಪ್ರಮಾದವೆಂದೂ ಪರಿಗಣಿಸಿ ರದ್ದು ಮಾಡಿದೆಯೋ ಅದೇ ರೀತಿ ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 344, 351 ನೇ ವಿಧಿಗಳನ್ನು ರದ್ದು ಮಾಡಬೇಕು ಎಂದು ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಕೆಲ ರಾಜಕೀಯ ಪಕ್ಷಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದವು.

ಕೇಂದ್ರದ ವಿರುದ್ಧ ಕನ್ನಡ ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಅಲ್ಲದೇ ಸಂವಿಧಾನದ 8ನೇ ಅನುಸೂಚಿಯಲ್ಲಿರುವ ನಮ್ಮ ಕನ್ನಡವೂ ಸೇರಿದಂತೆ ಎಲ್ಲಾ 22 ಭಾಷೆಗಳನ್ನು ಸಮಾನವಾಗಿ ಪರಿಗಣಿಸಬೇಕು. ಈ ಎಲ್ಲಾ ಭಾಷೆಗಳನ್ನು ಸಮಾನವಾಗಿ ಬೆಳೆಸುವ ರಕ್ಷಿಸುವ ಬದ್ದತೆಯನ್ನು ಕೇಂದ್ರ ಸರ್ಕಾರ ತೋರಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

22 ಭಾಷೆಗಳಲ್ಲದೇ ಭಾರತದ ವಿವಿಧ ಭಾಗಗಳಲ್ಲಿ ಅಸ್ತಿತ್ವದಲ್ಲಿರುವ ತುಳು, ಕೊಡವ, ಹವ್ಯಕ, ಬಡಗ, ವಿವಿಧ ಭಾಷೆಗಳನ್ನು ಸಂರಕ್ಷಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದು ಕೂಡಲೇ ಎಲ್ಲಾ ಮನವಿಗಳನ್ನು ಈಡೇರಿಸಬೇಕು ಎಂದೂ ಆಗ್ರಹಿಸಿದರು.

ನಾಡ ಧ್ವಜಾದ ವಿಚಾರವಾಗಿ ಅವಹೇಳನಕಾರಿ ಹೇಳಿಕೆ ನೀಡಿ ನವಂಬರ್ 1 ರಂದು ನಾಡಧ್ವಜಾ ಹಾರಿಸದೇ ಅವಮಾನ ಮಾಡಿರುವ ಕನ್ನಡ ವಿರೋಧಿ ಸಚಿವ ಸಿ ಟಿ ರವಿ ಕೂಡಲೇ ಕನ್ನಡಿಗರನ್ನು ಕ್ಷಮೆ ಕೋರಬೇಕು ಎಂದೂ ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ನೂರಾರು ಕನ್ನಡ ಪರ ಕಾರ್ಯಕರ್ತರು ಭಾಗವಹಿಸಿದ್ದರು.

Intro:Kn_Ckm_04_Protest_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಕೆಲ ರಾಜಕೀಯ ಪಕ್ಷಗಳು ಸೇರಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ್ದು ನಗರದ ತಾಲೂಕ್ ಆಫೀಸ್ ಕಚೇರಿಯಿಂದಾ ಆಜಾದ್ ಪಾರ್ಕ್ ವೃತ್ತದವರೆಗೂ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ಹೇಗೆ ಐತಿಹಾಸಿಕ ಪ್ರಮಾದವೆಂದೂ ಪರಿಗಣಿಸಿ ರದ್ದು ಮಾಡಿದ್ದೇಯೋ ಅದೇ ರೀತಿ ಹಿಂದೀ ಭಾಷೆಗೇ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 344, 351 ನೇ ವಿಧಿಗಳನ್ನು ರದ್ದು ಮಾಡಬೇಕು. ಸಂವಿಧಾನದ 8ನೇ ಅನುಸೂಚಿಯಲ್ಲಿರುವ ನಮ್ಮ ಕನ್ನಡವೂ ಸೇರಿದಂತೆ ಎಲ್ಲಾ 22 ಭಾಷೆಗಳನ್ನು ಸಮಾನವಾಗಿ ಪರಿಗಣಿಸಬೇಕು ಈ ಎಲ್ಲ ಭಾಷೆಗಳನ್ನು ಸಮಾನವಾಗಿ ಬೆಳೆಸುವ ರಕ್ಷಿಸುವ ಬದ್ದತೆಯನ್ನು ಕೇಂದ್ರ ಸರ್ಕಾರ ತೋರಬೇಕು.22 ಭಾಷೆಗಳಲ್ಲದೇ ಭಾರತದ ವಿವಿಧ ಭಾಗಗಳಲ್ಲಿ ಅಸ್ತಿತ್ವದಲ್ಲಿರುವ ತುಳು, ಕೊಡವ, ಹವ್ಯಕ, ಬಡಗ, ವಿವಿಧ ಭಾಷೆಗಳನ್ನು ಸಂರಕ್ಷಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದು ಕೂಡಲೇ ಎಲ್ಲಾ ಮನವಿಗಳನ್ನು ಈಡೇರಿಸಬೇಕು ಎಂದೂ ಆಗ್ರಹಿಸಿದರು.ನಾಡಧ್ವಜಾದ ವಿಚಾರವಾಗಿ ಅವಹೇಳನಕಾರಿ ಹೇಳಿಕೆ ನೀಡಿ ನವಂಬರ್ 1 ರಂದು ನಾಡಧ್ವಜಾ ಹಾರಿಸದೇ ಅವಮಾನ ಮಾಡಿರುವ ಕನ್ನಡ ವಿರೋಧಿ ಸಚಿವ ಸಿ ಟಿ ರವಿ ಕೂಡಲೇ ಕನ್ನಡಿಗರನ್ನು ಕ್ಷಣೆ ಕೋರಬೇಕು ಎಂದೂ ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ನೂರಾರು ಕನ್ನಡ ಪರ ಕಾರ್ಯಕರ್ತರು ಭಾಗವಹಿಸಿದ್ದರು....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.