ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದಲ್ಲಿ ಎಡಪಕ್ಷಗಳು ಪ್ರತಿಭಟನೆಗೆ ಮುಂದಾಗಿದ್ದು, ಈ ವೇಳೆ ಜಿಲ್ಲಾ ಪೋಲಿಸರು ಕಚೇರಿಯಲ್ಲಿಯೇ ಪ್ರತಿಭಟನಾಕಾರರನ್ನು ತಡೆದು ಹೊರ ಬರದಂತೆ ನೋಡಿಕೊಂಡಿದ್ದಾರೆ.
ಚಿಕ್ಕಮಗಳೂರು ನಗರದ ತಮಿಳು ಕಾಲೊನಿಯಲ್ಲಿರುವ ಸಿಪಿಐ ಕಚೇರಿಯಲ್ಲಿ ಈ ಘಟನೆ ನಡೆದಿದ್ದು. ಏಕಾಂಗಿಯಾಗಿ ಪಕ್ಷದ ಬಾವುಟ ಹಿಡಿದು ಪ್ರತಿಭಟನೆಗೆ ಮುಂದಾದ ಸಿಪಿಐ ಮುಖಂಡ ಅಮ್ಜದ್ನನ್ನು ಪೊಲೀಸರು ತೆಡೆದಿದ್ದಾರೆ. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡದಂತೆ ಮನವೊಲಿಕೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವ ಮಾತಿನ ಚಕಮಕಿ ನಡೆದಿದೆ. ಹೋರಾಟ ಮಾಡಲು ಮುಂದಾದ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಚೇರಿಯಲ್ಲಿಯೇ ತಡೆದ ಪೊಲೀಸರು, ಹೊರ ಬರದಂತೆ ಬಾಗಿಲಲ್ಲೇ ಕಾವಲು ನಿಂತಿದ್ದಾರೆ.