ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಹಾಗೂ ತರೀಕೆರೆ ತಾಲೂಕಿಲ್ಲಿ ಎರಡು ಕೊರೊನಾ ಪ್ರಕರಣ ದಾಖಲಾಗಿದ್ದವು. ಇದಾಗಿ ಮೂರು ದಿನಗಳ ನಂತರ ಮೂಡಿಗೆರೆಯ ವೈದ್ಯನ ನೆಗೆಟಿವ್ ಫಲಿತಾಂಶ ಬಂದಿತ್ತು. ಇದರಿಂದ ಮೂಡಿಗೆರೆ ತಾಲೂಕಿನ ಜನರು ನಿಟ್ಟುಸಿರುವ ಬಿಟ್ಟಿದ್ದರು. ಇದರ ಬೆನ್ನಲ್ಲೆ ಇದೀಗ ತರೀಕೆರೆಯ ಸೋಂಕಿತ ಗರ್ಭಿಣಿ ವರದಿ ಸಹ ನೆಗೆಟಿವ್ ಬಂದಿದ್ದು, ಈ ವರದಿಯಿಂದ ತಾಲೂಕಿನ ಜನ ಹರ್ಷ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಜಿಲ್ಲಾಡಳಿತವು ಬೆಂಗಳೂರಿಗೆ ಕಳುಹಿಸಿದ್ದ ಸ್ಯಾಂಪಲ್ನಲ್ಲಿ ನೆಗೆಟಿವ್ ಬಂದಿದ್ದು, ಈ ಗರ್ಭಿಣಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಐದು ಬಾರಿ ಕಳುಹಿಸಿದ್ದರು. ಐದು ಬಾರಿ ನೆಗೆಟಿವ್ ಎಂದು ವರದಿ ಬಂದಿದೆ.
ಈ ಕಾರಣದಿಂದ ಗರ್ಭಿಣಿಯನ್ನು ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದು, ತರೀಕೆರೆಯ ಕೋಡಿ ಕ್ಯಾಂಪ್ನ ಜನರು ಈ ಮಹಿಳೆಯನ್ನು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ.
ಈ ಮಹಿಳೆ ಹಾಗೂ ಆಕೆಯ ಕುಟುಂಬದ ಸದಸ್ಯರಿಗೆ ಹೂವಿನ ಹಾರ ಹಾಕಿ, ಚಪ್ಪಾಳೆ ಹೊಡೆದು, ಪಟಾಕಿ ಸಿಡಿಸಿ ಗರ್ಭಿಣಿಯನ್ನು ಬರ ಮಾಡಿಕೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ 14 ಕೊರೊನಾ ಪಾಸಿಟಿವ್ ಪ್ರಕರಣ ಇದ್ದು, ಈ ಎಲ್ಲಾ ಕೊರೊನಾ ರೋಗಿಗಳನ್ನು ಕೋವಿಡ್ ಆಸ್ವತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಮುಂದುವರಿಸಲಾಗಿದೆ.