ಚಿಕ್ಕಮಗಳೂರು: ಚಿಕಿತ್ಸೆಗೆ ತೆರಳುತ್ತಿದ್ದ ಎರಡು ತಿಂಗಳ ಮಗುವನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೈನ್ಸ್ಗೆ ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ಚಿಕ್ಕಮಗಳೂರು ಜಿಲ್ಲೆಯ ಪೊಲೀಸರು ಮಾಡಿಕೊಟ್ಟಿದ್ದಾರೆ.
ಚಿಕ್ಕಮಗಳೂರು ಮೂಲದ ಆಂಬ್ಯುಲೈನ್ಸ್ ನಲ್ಲಿ ಶಿವಮೊಗ್ಗದಿಂದ ಎರಡು ತಿಂಗಳ ಮಗುವನ್ನು ಚಿಕಿತ್ಸೆಗೆಂದು ಮಂಗಳೂರಿಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಆಂಬ್ಯುಲೆನ್ಸ್ ಚಾಲಕನ ಮನವಿಗೆ ಸಹಕರಿಸಿದ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದರು.
ಇದರಿಂದಾಗಿ ಶಿವಮೊಗ್ಗದಿಂದ ಮಂಗಳೂರಿಗೆ ಕೇವಲ 3 ಗಂಟೆಯಲ್ಲಿ ಆಂಬ್ಯುಲೈನ್ಸ್ ತಲುಪಿತು. ಶಿರಾಳಕೊಪ್ಪದ 2 ತಿಂಗಳ ಮಗು ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಈಗ ಮಂಗಳೂರಿನ ಖಾಸಗಿ ಆಸ್ವತ್ರೆಯಲ್ಲಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.