ಚಿಕ್ಕಮಗಳೂರು :ಮಂಗಳೂರಿನಲ್ಲಿ ಪೌರತ್ವದ ಕಿಚ್ಚು ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆ ಚಿಕ್ಕಮಗಳೂರು ಭಾಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕೆಲ ಖಾಸಗಿ ಸಂಸ್ಥೆಗಳ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು,ಜಯಪುರ, ಕೊಪ್ಪ, ತಾಲೂಕಿನಲ್ಲಿ ಹಲವಾರು ಭಾಗದಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಂಡಿದ್ದು, ತಾತ್ಕಲಿಕವಾಗಿ ಇಂಟರ್ನೆಟ್ ಸ್ಥಗಿತಗೊಳಿಸಲಾಗುವುದು ಎಂದೂ ಮೆಸೇಜ್ ಬಂದಿದ್ದು ಸರ್ಕಾರದ ಆದೇಶದ ಪ್ರಕಾರ ಮುಂದಿನ ಸೂಚನೆ ಬರುವವರೆಗೂ ನಿಮ್ಮ ಪ್ರದೇಶದಲ್ಲಿ ಇಂಟರ್ ನೇಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂಬ ಎಸ್ಎಂಎಸ್ಗಳು ಬಂದಿವೆ.ಇನ್ನು ಜಿಲ್ಲೆಯ ಗಡಿ ಭಾಗಗಳಲ್ಲಿ ಖಾಕಿ ಕಣ್ಗಾವಲಿಟ್ಟಿದ್ದು, ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬರುವ ವಾಹನ ಹಾಗೂ ಚಿಕ್ಕಮಗಳೂರಿನಿಂದ ಮಂಗಳೂರು ಕಡೆಗೆ ಹೋಗುವಂತಹ ಪ್ರತಿಯೊಂದು ವಾಹನಗಳನ್ನು ಪೋಲಿಸರು ತಪಾಸಣೆ ನಡೆಸುತ್ತಿದ್ದಾರೆ.
ಡಿವೈಎಸ್ಪಿ ನೇತೃತ್ವದಲ್ಲಿ ಪ್ರತಿಯೊಂದು ವಾಹನಗಳ ತಪಾಸಣೆ ನಡೆಯುತ್ತಿದ್ದು, ಕೊಟ್ಟಿಗೆಹಾರ ಚೆಕ್ಪೋಸ್ಟ್ ಹಾಗೂ ಬಣಕಲ್ನಲ್ಲಿ ಸಂಚಾರ ಮಾಡುವ ವಾಹನಗಳ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾ ಇಟ್ಟಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಎಂದು ಭಾರಿ ಬಂದೋಬಸ್ತ್ ಕೈಗೊಳ್ಳಲಾಗಿದೆ.