ETV Bharat / state

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಏರಿಕೆ.. ಆರೋಪಿಗಳಿಗೆ ಜೈಲಲ್ಲಿ ಕಾಡ್ತಿದೆಯಂತೆ ಪಶ್ಚಾತ್ತಾಪ

author img

By

Published : Jun 30, 2022, 4:50 PM IST

ಚಿಕ್ಕಮಗಳೂರು ಜಿಲ್ಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳು 50ಕ್ಕೂ ಹೆಚ್ಚು ಜನರಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಜಿಲ್ಲಾ ಪೊಲೀಸ್​ ಕಚೇರಿ
ಜಿಲ್ಲಾ ಪೊಲೀಸ್​ ಕಚೇರಿ

ಚಿಕ್ಕಮಗಳೂರು: ಹದಿನೈದು ಎಕರೆ ವಿಸ್ತಾರವಾದ ಜಿಲ್ಲಾ ಕಾರಾಗೃಹದಲ್ಲಿ ಸುಮಾರು 269 ವಿಚಾರಣಾಧೀನ ಕೈದಿಗಳಿದ್ದಾರೆ. ಇವರಲ್ಲಿ ಸುಮಾರು 160 ಕ್ಕೂ ಹೆಚ್ಚು ಕೈದಿಗಳಿರುವುದು ಪೋಕ್ಸೋ ಪ್ರಕರಣದಲ್ಲಿ ಬಂಧಿತರಾದವರು ಎಂಬುದು ಆತಂಕಕಕ್ಕೆ ಕಾರಣವಾಗಿದೆ.

ಜೈಲರ್ ರಾಕೇಶ್​ ಕಾಂಬಳೆ ಅವರು ಮಾತನಾಡಿರುವುದು

ಜಿಲ್ಲೆಯ ಶೃಂಗೇರಿಯಲ್ಲಿ 10 ನೇ ತರಗತಿ ವಿದ್ಯಾರ್ಥಿನಿ ಮೇಲೆ ಮೂರು ತಿಂಗಳ ಅವಧಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳೇ 50ಕ್ಕೂ ಹೆಚ್ಚು ಜನರಿದ್ದಾರೆ. ಇನ್ನುಳಿದಂತೆ ಜಿಲ್ಲೆಯ ಬೇರೆ-ಬೇರೆ ಭಾಗದ ಪೋಕ್ಸೋ ಕೇಸಲ್ಲಿ ಬಂಧಿತರಾಗದವರೇ 100 ಕ್ಕೂ ಹೆಚ್ಚು ಜನರಿದ್ದಾರೆ. ಅಂದು ಹೆಸರು-ಮರ್ಯಾದೆ ಎರಡೂ ಹಾಳಾಗುವಂತಹ ಮಣ್ಣು ತಿನ್ನುವ ಕೆಲಸ ಮಾಡಿದವರು ಇಂದು ಜೈಲಲ್ಲಿ ಪಶ್ಚಾತ್ತಾಪ ಪಡುತ್ತಿದ್ದಾರೆ.

ಮಲೆನಾಡು ಭಾಗದಲ್ಲೇ ಹೆಚ್ಚಳ: ಜೈಲಿನಲ್ಲಿರುವ ಆ 160 ಪೋಕ್ಸೋ ಪ್ರಕರಣದ ಕೈದಿಗಳಲ್ಲಿ ಮಲೆನಾಡಿಗರೇ ಹೆಚ್ಚು ಅನ್ನೋದು ಮತ್ತೊಂದು ಆತಂಕಕಾರಿ ಬೆಳವಣಿಗೆ. ಅರಣ್ಯ ಹಾಗೂ ಅರಣ್ಯದಂತಹ ಕಾಫಿ ತೋಟಗಳೇ ಹೆಚ್ಚಾಗಿರುವ ಮಲೆನಾಡು ಭಾಗದಲ್ಲೇ ಪೋಕ್ಸೋ ಪ್ರಕರಣಗಳು ಹೆಚ್ಚು ದಾಖಲಾಗಿವೆ. ಇವರಲ್ಲಿ ಬೇರೆ-ಬೇರೆ ಊರುಗಳಿಂದ ದುಡಿಮೆ ಅರಸಿ ಬರುವ ಆರೋಪಿಗಳೂ ಇದ್ದಾರೆ. ಹಾಗಾಗಿ, ಜನ ಕೂಡ ಮಕ್ಕಳ ಬಗ್ಗೆ ಎಚ್ಚರದಿಂದಿರಬೇಕಾಗಿದೆ. ಈ ಮಧ್ಯೆ ಜೈಲಿನಲ್ಲಿ ಪಶ್ಚಾತ್ತಾಪ ಪಡುತ್ತಿರುವ ಕೈದಿಗಳ ಮನ ಪರಿವರ್ತನೆಯ ಕಾರ್ಯ ನಡೆಯುತ್ತಿದೆಯಂತೆ.

'ಕೈದಿಗಳದ್ದು ಏನೇ ಅಪರಾಧದ ಹಿನ್ನೆಲೆ ಇರಬಹುದು. ಆದರೆ ನಾವು ಅವರನ್ನು ಮಾನವೀಯ ನೆಲೆಗಟ್ಟಿನಲ್ಲೇ ನೋಡುತ್ತೇವೆ. ಹಾಗಾಗಿ ಅವರು ಈ ಕಾರಾಗೃಹಕ್ಕೆ ಬಂದ ನಂತರ ಮನಪರಿವರ್ತನೆ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೇವೆ. ಹಾಗೆಯೇ, ಅವರಿಗೆ ಯೋಗ, ಧ್ಯಾನ ಮುಂತಾದ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಸಹಾಯಕವಾಗುವಂತೆ ತರಬೇತಿ ನೀಡುತ್ತಿದ್ದೇವೆ' ಎಂದು ಜೈಲರ್ ರಾಕೇಶ್ ಕಾಂಬಳೆ ಹೇಳಿದರು.

ಓದಿ: ಮದ್ಯ ಕುಡಿಯಲು ಹಣ ನೀಡದ್ದಕ್ಕೆ ಸಿಟ್ಟು.. ಮೈಸೂರಲ್ಲಿ ಸಾಕು ತಾಯಿಯನ್ನ ಕೊಚ್ಚಿ ಕೊಂದ ಮಗ!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.