ಚಿಕ್ಕಮಗಳೂರು : ಇಂಧನ ಬೆಲೆ ಗಗನಮುಖಿ ಆಗಿರೋ ಹಿನ್ನೆಲೆ ನೂತನ ವಧು-ವರರಿಗೆ ಪೆಟ್ರೋಲ್ ಉಡುಗೊರೆ ನೀಡಿರೋ ಘಟನೆ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.
ಮೂಡಿಗೆರೆ ಪಟ್ಟಣದ ಬಂಟರ ಭವನದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ಮರ್ಕಲ್ ಹಾಗೂ ವೈಷ್ಣವಿ ಎಂಬುವರ ಮದುವೆ ನಡೆಯಿತು. ಈ ವೇಳೆ ವೇದಿಕೆ ಮೇಲೆ ರಿಸೆಪ್ಷನ್‍ಗೆ ನಿಂತಿದ್ದ ದಂಪತಿಗೆ ಮದುವೆ ಗಂಡು ಸಚಿನ್ ಅವರ ಸ್ನೇಹಿತರು ಮೂರು ಲೀಟರ್ ಪೆಟ್ರೋಲ್ ಅನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ.
ನವದಂಪತಿ ಹಾಗೂ ಮದುವೆಗೆ ಬಂದಿದ್ದ ಇತರರು ಪೆಟ್ರೋಲ್ ಬಾಟಲಿಯಲ್ಲಿದ್ದ ಉಡುಗೊರೆ ನೋಡಿ ನಸುನಕ್ಕಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.