ETV Bharat / state

ಲಾಕ್​ಡೌನ್​ಗೆ ತಲೆ ಕೆಡಿಸಿಕೊಳ್ಳದ ಜನ: ಚಿಕ್ಕಮಗಳೂರಲ್ಲಿ ರಸ್ತೆಗಿಳಿದ ವಾಹನಗಳು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಇದರಿಂದ ಜನರು ಮನ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಅನುಮಾನ ಜಿಲ್ಲೆಯಲ್ಲಿ ಮೂಡಿದೆ.

author img

By

Published : Apr 16, 2020, 4:08 PM IST

People who do not follow the lock down order
ಲಾಕ್​ಡೌನ್​ಗೆ ತಲೆಕೆಡಿಸಿಕೊಳ್ಳದ ಜನರು

ಚಿಕ್ಕಮಗಳೂರು: ದೇಶವೇ ಲಾಕ್​ಡೌನ್​ ಆಗಿದ್ದರೂ ನಗರದ ಎಂ.ಜಿ. ರಸ್ತೆ, ಐ.ಜಿ. ರಸ್ತೆಯಲ್ಲಿ ಜನರು ಬೀದಿಗಿಳಿದಿದ್ದು ಕಂಡು ಬಂತು. ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಬೈಕ್​ ಸವಾರರು ನಿರ್ಭಯವಾಗಿ ಸಂಚರಿಸುತ್ತಿದ್ದರು.

ಲಾಕ್​ಡೌನ್​ಗೆ ತಲೆ ಕೆಡಿಸಿಕೊಳ್ಳದ ಜನರು

ಕೊರೊನಾ ಸೋಂಕು ತಡೆಗೆ 2ನೇ ಹಂತದ ಲಾಕ್​ಡೌನ್ ಆದೇಶ ನೀಡಲಾಗಿದೆ. ಆದರೆ, ಚಿಕ್ಕಮಗಳೂರು ಜನರು ಇದಕ್ಕೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಹಾಗಾಗಿ ಜನರು ಬೀದಿಗಿಳಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಅಪಾಯಕಾರಿ ನಡೆಯಿಂದ ಸೋಂಕಿತ ಜಿಲ್ಲೆಗಳ ಪಟ್ಟಿಗೆ ಸೇರುವ ಸಾಧ್ಯತೆ ಇದೆ. ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ತುರ್ತು ನಮ್ಮೆಲ್ಲರದ್ದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.