ಚಿಕ್ಕಮಗಳೂರು: ಜಿಲ್ಲೆಯ ಹೊಸಪೇಟೆಯಲ್ಲಿ ಅರಣ್ಯ ಇಲಾಖೆಯ ಶಿಬಿರದ ಶೌಚಾಲಯದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದ್ದರ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಶ್ರೀಗಂಧದ ಮರ ಕಡಿಯಲು ಅರಣ್ಯಕ್ಕೆ ಶಿವಮೊಗ್ಗ ಮೂಲದ 5 ಜನರ ತಂಡ ಬಂದಿತ್ತು. ಅವರನ್ನು ಬೆನ್ನಟ್ಟಿದ್ದ ಇಲಾಖೆ ಸಿಬ್ಬಂದಿ ಇಬ್ಬರನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ಮಾಡುವ ಸಂದರ್ಭದಲ್ಲಿ ಓರ್ವನನ್ನು ಹೊಸಪೇಟೆಯ ಫಾರೆಸ್ಟ್ ಕ್ವಾಟ್ರಸ್ ಕರೆ ತಂದು ಹಲ್ಲೆ ನಡೆಸಿ, ಸಮೀಪದ ಕೋಟೆ ಗ್ರಾಮದ ಆನೆ ಶಿಬಿರದ ಶೌಚಾಲಯದಲ್ಲಿ ಹಾಕಿದ್ದರು' ಎಂದು ಗ್ರಾಮಸ್ಥರು ದೂರಿದ್ದಾರೆ.
ಸ್ಥಳೀಯರ ಆರೋಪದ ಕುರಿತು ತನಿಖೆ: ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಎಫ್ಓ ಕ್ರಾಂತಿ, ಮೃತಪಟ್ಟಿರುವ ವ್ಯಕ್ತಿಯನ್ನು ಶಿವಮೊಗ್ಗ ಮೂಲದ ರವಿ ಎಂದು ಗುರುತಿಸಲಾಗಿದೆ. ಈತನೂ ಸೇರಿದಂತೆ ಐವರು ಶ್ರೀಗಂಧ ಕಳವಿಗೆ ಅರಣ್ಯಕ್ಕೆ ಬಂದಿದ್ರು. ನಮ್ಮವರು ಅವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರು ಆರೋಪದ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಶ್ರೀಗಂಧ ಕಳ್ಳ ಅಂತಾದ್ರೆ ಕಡಿದಿರುವ ಶ್ರೀಗಂಧ ಎಲ್ಲಿದೆ?, ಇನ್ನೊಬ್ಬನನ್ನು ಎಲ್ಲಿ ಬಚ್ಚಿಟ್ಟಿದ್ದೀರಿ?, ಕಳ್ಳನಾಗಿದ್ರೆ ಕಾನೂನು ಕ್ರಮ ಕೈಗೊಳ್ಳೋದನ್ನು ಬಿಟ್ಟು ಯಾಕೆ ಕೊಂದ್ರಿ? ಅನ್ನೋ ಪ್ರಶ್ನೆಗಳ ಸುರಿಮಳೆಯನ್ನೇ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಸುರಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಅರಣ್ಯ ಇಲಾಖೆ ಶೌಚಾಲಯದಲ್ಲಿ ವ್ಯಕ್ತಿಯ ಶವ, ಲಾಕಪ್ ಡೆತ್ ಆರೋಪ