ETV Bharat / state

ಮೂಲಸೌಕರ್ಯಗಳಿಲ್ಲದೆ ಕಂಗಲಾದ ಬಿಳಗಲ್ ಗ್ರಾಮಸ್ಥರು.. ಅನಾರೋಗ್ಯ ಪೀಡಿತರಿಗೆ ಮರದ ಬಡಿಗೆಯೇ ಗತಿ

ಮೂಲಕಸೌಕರ್ಯಗಳಿಲ್ಲದ ಕುಗ್ರಾಮ- ಹೆರಿಗೆಗೆ ತೆರಳಿದ್ದ ಮಹಿಳೆಯನ್ನು ನಾಲ್ಕೈದು ಜನರು ಬಡಿಗೆಗಳಿಂದ ಕಟ್ಟಿದ್ದ ಚೇರ್​ ಮೇಲೆ ಹೊತ್ತು ಸಾಗಿದರು-ಕಾಫಿನಾಡ ಜನರ ಗೋಳು

ಬಾಣಂತಿ ಮಹಿಳೆಯನ್ನು ಬಡಿಗೆಯ ಮೂಲಕ ಹೊತ್ತು ಸಾಗಿಸುತ್ತಿರುವುದು

author img

By

Published : Jul 24, 2022, 6:56 PM IST

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕು ವ್ಯಾಪ್ತಿಯ ಸಂಸೆ ಗ್ರಾಮ ಪಂಚಾಯತ್‍ಗೆ ಒಳಪಟ್ಟಿರುವ ಬಿಳಗಲ್ ಗ್ರಾಮದ 35 ಗಿರಿಜನ ಕುಟುಂಬಗಳು ಸಮರ್ಪಕ ರಸ್ತೆ, ಸೇತುವೆ ಸೌಲಭ್ಯದ ಕೊರತೆಯಿಂದ ಹೊರ ಜಗತ್ತಿನ ಸಂಪರ್ಕಕ್ಕೆ ಬರಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುಗ್ರಾಮದ ಬಳಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಭದ್ರಾ ನದಿ ದಾಟಲು ತೂಗು ಸೇತುವೆ ಇದೆಯಾದರೂ ಸೇತುವೆಯಲ್ಲಿ ವಾಹನಗಳ ಸಂಚಾರ ಸಾಧ್ಯವಿಲ್ಲದೆ ಅನಾರೋಗ್ಯ ಪೀಡಿತರನ್ನು, ಗರ್ಭಿಣಿಯರು, ಬಾಣಂತಿಯರನ್ನು ಮರಕ್ಕೆ ಕಟ್ಟಿ ಹೊತ್ತು ಸಾಗಿಸಬೇಕಾಗಿದೆ.

ಸಮರ್ಪಕ ರಸ್ತೆ, ಸೇತುವೆ ಸಮಸ್ಯೆ ಬಗ್ಗೆ ಸ್ಥಳೀಯರು ಮಾಹಿತಿ ಹಂಚಿಕೊಂಡಿದ್ದಾರೆ

ಬಾಣಂತಿಯೊಬ್ಬರನ್ನು ಮರದ ಬಡಿಗೆಗಳ ಸಹಾಯದಿಂದ ಗ್ರಾಮಸ್ಥರು ಹೊತ್ತು ಸಾಗಿಸಿದ್ದು, ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆ ಗ್ರಾಮವನ್ನು ಪ್ರತಿನಿಧಿಸುವ ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬಿಳಗಲ್ ಗ್ರಾಮದಲ್ಲಿ ಸುಮಾರು 35 ಗಿರಿಜನ ಸಮುದಾಯದ ಕುಟುಂಬಗಳು ವಾಸಿಸುತ್ತಿವೆ.

ಈ ಕುಟುಂಬಗಳು ಮೂಲತಃ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ನಿವಾಸಿಗಳಾಗಿದ್ದು, ಕುದುರೆ ಮುಖದಲ್ಲಿರುವ ಲಕ್ಯಾ ಡ್ಯಾಂ ನಿರ್ಮಾಣದ ಸಂದರ್ಭದಲ್ಲಿ ಈ ಕುಟುಂಬಗಳನ್ನು ಅಲ್ಲಿಂದ ಒಕ್ಕಲೆಬ್ಬಿಸಿದ ಪರಿಣಾಮ ಸಂತ್ರಸ್ತರಿಗೆ ಬಿಳಗಲ್ ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. ಈ ಕುಟುಂಬಗಳು ಸದ್ಯ ವಾಸಿಸುತ್ತಿರುವ ಬಿಳಗಲ್ ಗ್ರಾಮದ ಪಕ್ಕದಲ್ಲಿ ಭದ್ರಾ ನದಿ ಸೇರಿದಂತೆ ಸಣ್ಣ ಹಳ್ಳವೊಂದು ಹರಿಯುತ್ತಿದೆ. ಈ ಎರಡು ನದಿಗಳನ್ನು ದಾಟಿಕೊಂಡು ನಿವಾಸಿಗಳು ತಮ್ಮ ಗ್ರಾಮ ತಲುಪಬೇಕಿದೆ.

ಸಮರ್ಪಕ ರಸ್ತೆ, ಸೇತುವೆ ಸಮಸ್ಯೆ ಬಗ್ಗೆ ಸ್ಥಳೀಯ ಮಹಿಳೆ ಮಾಹಿತಿ ಹಂಚಿಕೊಂಡಿದ್ದಾರೆ

ಕರುಣಾಜನಕ ಸ್ಥಿತಿ: ಭದ್ರಾ ನದಿ ದಾಟಲು ಸುಸಜ್ಜಿತವಾದ ಆಧುನಿಕ ತೂಗು ಸೇತುವೆಯನ್ನು ನಿರ್ಮಿಸಲಾಗಿದ್ದು, ಮತ್ತೊಂದು ನದಿ ದಾಟಲು ಸೇತುವೆಯನ್ನೂ ನಿರ್ಮಿಸಿಕೊಡಲಾಗಿದೆ. ಗ್ರಾಮದ ಜನರು ಈ ಸೇತುವೆ ಹಾಗೂ ತೂಗು ಸೇತುವೆ ಮೂಲಕ ಹೊರ ಜಗತ್ತಿನ ಸಂಪರ್ಕ ಸಾಧಿಸುತ್ತಿದ್ದಾರೆ. ಆದರೆ, ತೂಗು ಸೇತುವೆ ಮೂಲಕ ವಾಹನಗಳ ಸಂಚಾರ ಸಾಧ್ಯವಿಲ್ಲದ ಪರಿಣಾಮ ಗ್ರಾಮದಲ್ಲಿರುವ ಜನರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಹಾಗೂ ಗರ್ಭಿಣಿ, ಬಾಣಂತಿಯರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಅವರನ್ನು ಮರದ ಬಡಿಗೆಗಳಿಗೆ ಕಟ್ಟಿಕೊಂಡು ಸುಮಾರು 2 ಕಿ.ಮೀ ದೂರ ಕ್ರಮಿಸಿ ಬಳಿಕ ವಾಹನಗಳ ಮೂಲಕ ಆಸ್ಪತ್ರೆಗೆ ಸಾಗಿಸಬೇಕಾದ ಕರುಣಾಜನಕ ಸ್ಥಿತಿ ಗ್ರಾಮಸ್ಥರದ್ದಾಗಿದೆ.

ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಹೆರಿಗೆಗೆ ತೆರಳಿದ್ದ ಮಹಿಳೆಯೊಬ್ಬರನ್ನು ಎರಡು ಬಡಿಗೆಗಳಿಗೆ ಕಟ್ಟಲಾದ ಚೇರ್​ವೊಂದರಲ್ಲಿ ಕೂರಿಸಿಕೊಂಡು ನಾಲ್ಕೈದು ಜನರು ತೂಗು ಸೇತುವೆ ಮೇಲೆ ಹರಸಾಹಸ ಪಡುತ್ತಾ ಹೊತ್ತು ಸಾಗಿಸಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಾಸಕರಿಗೆ ಮನವಿ ಸಲ್ಲಿಸಿದ್ರೂ ಆಗದ ಪ್ರಯೋಜನ: ಬಿಳಗಲ್ ಗ್ರಾಮದ ಜನರು ತಮ್ಮ ಈ ಸಮಸ್ಯೆ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಸೇರಿದಂತೆ ಕ್ಷೇತ್ರದ ಶಾಸಕ ಎಂ. ಪಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ತೂಗು ಸೇತುವೆ ಇರುವ ಜಾಗದಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸಿದಲ್ಲಿ ಬಿಳಗಲ್ ಗ್ರಾಮದೊಳಗೆ ವಾಹನಗಳು ಬರಲು ಸಾಧ್ಯವಾಗಲಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಓದಿ: ರಸ್ತೆಗಾಗಿ ರೈತರ ಫಸಲು ನಾಶ.. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.