ETV Bharat / state

ಗುಡಿಸಲು ತೆರವಿಗೆ ಬಂದ ಅರಣ್ಯಾಧಿಕಾರಿಗಳ ಮೇಲೆ ದೊಣ್ಣೆಯಿಂದ ಹಲ್ಲೆ - ಅರಣ್ಯಾಧಿಕಾರಿಗಳ ಮೇಲೆ ದೊಣ್ಣೆಯಿಂದ ಹಲ್ಲೆ

ತೋಟದ ಸಮೀಪವಿದ್ದ ಗುಡಿಸಲು ತೆರವುಗೊಳಿಸಲು ಬಂದಿದ್ದ ಅರಣ್ಯಾಧಿಕಾರಿಗಳ ಮೇಲೆ ಮನೆ ಸದಸ್ಯರು ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ನಡೆದಿದೆ.

People Assaulted on Forest Department officials
ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ವಿಡಿಯೋ
author img

By

Published : Oct 23, 2020, 12:38 PM IST

ಚಿಕ್ಕಮಗಳೂರು: ಗುಡಿಸಲು ತೆರವಿಗೆ ಆಗಮಿಸಿದ್ದ ಅರಣ್ಯಾಧಿಕಾರಿಗಳ ಮೇಲೆ ಮನೆ ಸದಸ್ಯರು ಹಲ್ಲೆ ನಡೆಸಿರುವ ಘಟನೆ ಮೂಡಿಗೆರೆ ತಾಲೂಕಿನ ಕೂವೇ ಗ್ರಾಮದಲ್ಲಿ ನಡೆದಿದೆ.

ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ವಿಡಿಯೋ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ತೋಟದ ಸಮೀಪ ಜನರು ಸಣ್ಣದೊಂದು ಗುಡಿಸಲು ಕಟ್ಟಿಕೊಳ್ಳುವುದು ಸಹಜವಾಗಿದ್ದು, ಈ ವೇಳೆ ಆಗಮಿಸಿದ ಅರಣ್ಯಾಧಿಕಾರಿಗಳು ಗುಡಿಸಲು ತೆರವಿಗೆ ಮುಂದಾಗಿದ್ದಾರೆ. ಇದು ಅರಣ್ಯ ಇಲಾಖೆಯ ಜಾಗ ಎಂಬುದು ಅಧಿಕಾರಿಗಳ ವಾದವಾದರೆ, ಇದು ನಮಗೆ ಸೇರಿದ ಜಾಗ ಅನ್ನೋದು ಮನೆ ಸದಸ್ಯರ ವಾದವಾಗಿತ್ತು. ಮನೆಯವರು ಎಷ್ಟೇ ವಿನಂತಿಸಿದರೂ ಪ್ರಯೋಜನವಾಗದೆ, ಮಾತಿಗೆ ಮಾತು ಬೆಳೆದಿದ್ದರಿಂದ ಸ್ಥಳದಲ್ಲಿದ್ದ ದೊಣ್ಣೆಯಿಂದ ಆಧಿಕಾರಿಗಳ ಮೇಲೆ ಮನೆ ಸದಸ್ಯರು ಹಲ್ಲೆಗೈದಿದ್ದಾರೆ.

ಈ ರೀತಿಯ ಘಟನೆಗಳು ಮಲೆನಾಡು ಭಾಗದಲ್ಲಿ ನಿರಂತರವಾಗಿದ್ದು, ಅರಣ್ಯ ಇಲಾಖೆ ಹಾಗೂ ಜನರ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಸದ್ಯ ಈ ಘಟನೆ ಬಾಳೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.