ಚಿಕ್ಕಮಗಳೂರು: ಪ್ರತಿ ವರ್ಷ ಜಿಲ್ಲೆಯಲ್ಲಿ ಜೋಡೆತ್ತು ರೇಸ್ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತದೆ. ಅದೇ ರೀತಿ ಈ ವರ್ಷ ಕೂಡ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ರೇಸ್ನ ವೇಳೆ ಎತ್ತಿನ ಕಾಲು ಮುರಿದ ಘಟನೆ ನಡೆದಿದೆ.
ಈ ಘಟನೆಯ ಬಳಿಕ ಆಯೋಜಕರು ಕಾಲು ಮುರಿದ ಎತ್ತಿನ ಮಾಲೀಕನಿಗೆ ಸ್ಪರ್ಧೆಯ ಬಹುಮಾನದ ಹಣವನ್ನು ನೀಡಿದರು.
ಸ್ಪರ್ಧೆಯ ವೇಳೆ ಒಂದು ಎತ್ತಿನ ಕಾಲು ಮುರಿದು ಹೋಗಿದ್ದರಿಂದ ಜೋಡೆತ್ತು ಸ್ಪರ್ಧೆ ಅರ್ಧಕ್ಕೆ ನಿಲ್ಲಿಸಲಾಗಿದೆ. ಹಿರೇಮಗಳೂರಿನಲ್ಲಿ ನಡೆಸಿದ ಈ ಸ್ಪರ್ಧೆಗೆ ಹಾಸನ, ಮೈಸೂರು, ತುಮಕೂರು, ಮಂಡ್ಯ, ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಭಾಗದಿಂದ 30ಕ್ಕೂ ಅಧಿಕ ಜೋಡೆತ್ತುಗಳು ಆಗಮಿಸಿದ್ದವು.
ಇದನ್ನೂ ಓದಿ: ಚುರ್ಚೆಗುಡ್ಡ: ಒಂದೇ ವಾರದಲ್ಲಿ 50ಕ್ಕೂ ಹೆಚ್ಚು ಶ್ರೀಗಂಧ ಮರ ಕಳ್ಳತನ
ಈ ವೇಳೆ ಹಾಸನದ ಪ್ರದೀಪ್ ಎಂಬುವರು ಮಾತನಾಡಿ, ಜೋಡೆತ್ತು ಗಾಡಿ ಓಡಿಸುವ ಸ್ಪರ್ಧೆ ವೇಳೆ ಒಂದು ಎತ್ತು ಆಯತಪ್ಪಿ ಬಿದ್ದಿದೆ. ಪರಿಣಾಮ ಒಂದು ಕಾಲು ಮುರಿದು ಹೋಗಿದೆ. ಈ ವೇಳೆ ಅಲ್ಲೇ ಇದ್ದ ಪಶುವೈದ್ಯರು ಎತ್ತಿಗೆ ಚಿಕಿತ್ಸೆ ನೀಡಿದ್ದಾರೆ. ಇದನ್ನ ಕಂಡ ಆಯೋಜಕರು ಸ್ಪರ್ಧೆಯನ್ನ ಅರ್ಧಕ್ಕೆ ನಿಲ್ಲಿಸಿ, ಬಹುಮಾನದ 1 ಲಕ್ಷದ 35 ಸಾವಿರ ಹಣವನ್ನು ಎತ್ತಿನ ಮಾಲೀಕರಿಗೆ ನೀಡಿ, ಸಾಂತ್ವನ ಹೇಳಿದ್ದಾರೆ ಎಂದರು.