ಚಿಕ್ಕಮಗಳೂರು: ಜಿಲ್ಲೆ ಸದ್ಯ ಹಸಿರು ವಲಯದಲ್ಲಿದೆ. ಇಲ್ಲಿನ ಜನರು ನಿರಾಳರಾಗಿದ್ದರು. ಆದರೆ ಲಾಕ್ ಡೌನ್ ಸಡಿಲಿಕೆಯಾದ ಮೇಲೆ ಚಿಕ್ಕಮಗಳೂರಿಗೆ ಹೊರ ಜಿಲ್ಲೆಯ ಜನರು ಬರುತ್ತಿರುವುದು ಇಲ್ಲಿನ ಜನರ ಅತಂಕಕ್ಕೆ ಕಾರಣ.
ರಾಜ್ಯ ಸರ್ಕಾರದ ಅದೇಶದಂತೆ ಹೊರಗಿನಿಂದ ಬರುವ ಜನರಿಗೆ ಕೈಗೆ ಸೀಲ್ ಹಾಗು ಹೊಂ ಕ್ವಾರಂಟೈನ್ ಮಾಡುವುದನ್ನು ಜಿಲ್ಲಾಡಳಿತ ನಿಲ್ಲಿಸಿದೆ. ಸದ್ಯ ಸರ್ಕಾರದ ಈ ನಿರ್ಧಾರ ಗ್ರೀನ್ ಝೋನ್ಗಳಿಗೆ ತಲೆನೋವಾಗಿ ಪರಿಣಮಿಸಿದೆ.