ETV Bharat / state

ಹಿಡಿ ಚಿನ್ನಕ್ಕಾಗಿ ವೃದ್ಧೆಯನ್ನ ಭೀಕರವಾಗಿ ಕೊಂದ ದುಷ್ಕರ್ಮಿಗಳು!

author img

By

Published : Sep 24, 2020, 5:42 PM IST

ಕೇವಲ 20 ಗ್ರಾಂ ಚಿನ್ನಕ್ಕಾಗಿ ವೃದ್ಧೆಯೊಬ್ಬರನ್ನು ದುಷ್ಕರ್ಮಿಗಳು ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

Old woman murder, Old woman murdered for gold, Chikmagalur Old woman murder, Chikmagalur Old woman murder news, Chikmagalur crime news, ವೃದ್ಧೆ ಕೊಲೆ, ಚಿನ್ನಕ್ಕಾಗಿ ವೃದ್ಧೆ ಕೊಲೆ, ಚಿಕ್ಕಮಗಳೂರಿನಲ್ಲಿ ಚಿನ್ನಕ್ಕಾಗಿ ವೃದ್ಧೆ ಕೊಲೆ, ಚಿಕ್ಕಮಗಳೂರು ವೃದ್ಧೆ ಕೊಲೆ, ಚಿಕ್ಕಮಗಳೂರು ವೃದ್ಧೆ ಕೊಲೆ ಸುದ್ದಿ, ಚಿಕ್ಕಮಗಳೂರು ಅಪರಾಧ ಸುದ್ದಿ,
ತುಸು ಚಿನ್ನಕ್ಕಾಗಿ ವೃದ್ಧೆಯನ್ನು ಭೀಕರವಾಗಿ ಕೊಂದ ದುಷ್ಕರ್ಮಿಗಳು

ಚಿಕ್ಕಮಗಳೂರು : 20 ಗ್ರಾಂನ ಚಿನ್ನದ ಗುಂಡಿನ ಸರಕ್ಕೆ ಆಸೆ ಬಿದ್ದು 75 ವರ್ಷದ ವಯೋವೃದ್ದೆಯನ್ನು ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಅಜ್ಜಂಪುರದ ಶಿವನಂದಾ ಆಶ್ರಮದಲ್ಲಿ ನಡೆದಿದೆ.

ನಾಗರತ್ನಮ್ಮ (75) ಶಿವನಂದ ಆಶ್ರಮಕ್ಕೆ ನಿತ್ಯ ಬಂದು ಹೋಗುತ್ತಿದ್ದರು. ಇವರೇ ಕೆಲವೊಂದು ಬಾರಿ ಆಶ್ರಮದ ಕಸ ಗುಡಿಸೋದು, ಸ್ವಚ್ಛ ಮಾಡುವ ಕೆಲಸವನ್ನು ಸಹ ಮಾಡುತ್ತಿದ್ದರು. ಇಂದು ಬೆಳಗ್ಗೆ ನಾಗರತ್ನಮ್ಮ ಆಶ್ರಮಕ್ಕೆ ಬಂದ ವೇಳೆ ಯಾರೋ ಕಿಡಿಗೇಡಿಗಳು ಆಕೆಯ ತಲೆಗೆ ದೊಣ್ಣೆಯಿಂದ ಹೊಡೆದು ಚಿನ್ನದ ದೋಚಿ ಪರಾರಿಯಾಗಿದ್ದಾರೆ.

ರಕ್ತಸ್ರಾವದಲ್ಲಿ ಬಿದ್ದು ಒದ್ದಾಡುತ್ತಿದ್ದ ನಾಗರತ್ನಮ್ಮರನ್ನು ನೋಡಿದ ಸ್ಥಳೀಯರು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ವತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಿದ್ದರು. ಆದರೆ ಯಾವುದೇ ರೀತಿ ಪ್ರಯೋಜನವಾಗಲಿಲ್ಲ. ಆಸ್ಪತ್ರೆಯಲ್ಲಿಯೇ ನಾಗರತ್ನಮ್ಮ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಅಜ್ಜಂಪುರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.