ETV Bharat / state

ದಶಕಗಳಿಂದ ದೊರೆತಿಲ್ಲ ರಸ್ತೆ ಭಾಗ್ಯ: ತೆಪ್ಪದ ಮೂಲಕ ಶವ ಸಾಗಿಸಿದ ಗ್ರಾಮಸ್ಥರು! - ಮೂಡಿಗೆರೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ತಮ್ಮ ಗ್ರಾಮಕ್ಕೆ ಹೋಗಲು ರಸ್ತೆ ಇಲ್ಲದೆ ನದಿಯ ನೀರಿನಲ್ಲಿ ತೆಪ್ಪದ ಮೇಲೆಯೇ ಶವವನ್ನು ಗ್ರಾಮಸ್ಥರು ಸಾಗಿಸಿಕೊಂಡು ಹೋಗಿರುವ ಘಟನೆ ನಡೆದಿದೆ.

ತೆಪ್ಪದ ಮೂಲಕ ಮೃತದೇಹ ಸಾಗಣೆ
author img

By

Published : Aug 28, 2019, 11:31 PM IST

Updated : Aug 28, 2019, 11:39 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ತಮ್ಮ ಗ್ರಾಮಕ್ಕೆ ಹೋಗಲು ರಸ್ತೆ ಇಲ್ಲದೆ ನದಿಯ ನೀರಿನಲ್ಲಿ ತೆಪ್ಪದ ಮೇಲೆ ಸಂಬಂಧಿಕರು ಶವ ಸಾಗಿಸಿಕೊಂಡು ಹೋಗಿರುವ ಘಟನೆ ನಡೆದಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಳೆಕುಡಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ರಾಘವೇಂದ್ರ (29) ಇಂದು ಮಂಗಳೂರಿನಲ್ಲಿ ಮೃತಪಟ್ಟಿದ್ದರು. ಕಳೆದೊಂದು ವಾರದಿಂದ ಕಾಮಾಲೆ ಕಾಯಿಲೆಯಿಂದ ನಗರದ ಖಾಸಗಿ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮೃತದೇಹವನ್ನು ತೆಪ್ಪದ ಮೂಲಕ ಗ್ರಾಮಕ್ಕೆ ಸಾಗಿಸಿದ್ದಾರೆ.

ಈ ಭಾಗದಲ್ಲಿ ರಸ್ತೆ ಇಲ್ಲವೆಂದು ಹಲವಾರು ಬಾರಿ ಗ್ರಾಮದ ಜನರು ಅಳಲು ತೋಡಿಕೊಂಡಿದ್ದಾರೆ. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಳೆದ ಹಲವು ದಶಕಗಳಿಂದ ರಸ್ತೆಯಿಲ್ಲದೆ ತೆಪ್ಪದ ಮೂಲಕವೇ ಇಲ್ಲಿನ 6 ಕುಟುಂಬದ ಜನರು ಸಂಚರಿಸುತ್ತಿದ್ದಾರೆ.

Intro:Kn_ckm_04_Dead body in ukkada_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ ಆ ಗ್ರಾಮಕ್ಕೆ ಹೋಗಲು ರಸ್ತೆ ಇಲ್ಲದೆ ನದಿಯ ನೀರಿನಲ್ಲಿ ಉಕ್ಕಡದ ಮೇಲೆಯೇ ಶವವನ್ನು ಗ್ರಾಮಸ್ಥರು ತೆಗೆದುಕೊಂಡು ಹೋಗಿರುವ ಮನ ಕಲಕುವ ಘಟನೆ ನಡೆದಿದೆ.ತೆಪ್ಪದ ಮೂಲಕವೇ ಮೃತದೇಹವನ್ನು ಕುಟುಂಬದ ಸದಸ್ಯರು ಮನೆಗೆ ತೆಗೆದುಕೊಂಡು ಹೋಗಿದ್ದು ಭದ್ರ ನದಿಯಲ್ಲಿ ತೆಪ್ಪದ ಮೂಲಕ ಶವವನ್ನು ಕುಟುಂಬದ ಸದಸ್ಯರು ಸಾಗಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಳೆಕುಡಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕಳೆದ ಹಲವು ದಶಕಗಳಿಂದ ರಸ್ತೆ ಯಿಲ್ಲದೆ ಉಕ್ಕುಡದ ಮೂಲಕನೇ ರಸ್ತೆ ಸಂಪರ್ಕಕ್ಕೆ ಇಲ್ಲಿನ 6 ಕುಟುಂಬದ ಸದಸ್ಯರು ಬರುತ್ತಿದ್ದರು.ಗ್ರಾಮದ ರಾಘವೇಂದ್ರ(29) ಮಂಗಳೂರಿನಲ್ಲಿ ಇಂದು ಮೃತಪಟ್ಟಿದ್ರಿಂದ ತೆಪ್ಪದ ಮೂಲಕ ಮನೆಗೆ ಮೃತದೇಹ ರವಾನೆ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಜಾಂಡಿಸ್ ಕಾಯಿಲೆಯಿಂದ ಮಂಗಳೂರಿನ ಖಾಸಗಿ ಅಸ್ಪತ್ರೆಗೆ ರಾಘವೇಂದ್ರ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಈ ಭಾಗದಲ್ಲಿ ರಸ್ತೆ ಇಲ್ಲ ಎಂದೂ ಹಲವಾರು ಬಾರಿ ಈ ಗ್ರಾಮದ ಜನರು ಅನೇಕ ಹೋರಾಟಗಳು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ಜನ ಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಂತ್ಯ ಸಂಸ್ಕಾರ ಮಾಡಿದ್ದಾರೆ....

Conclusion:ರಾಜಕುಮಾರ್...
ಈಟಿವಿ ಭಾರತ್....
ಚಿಕ್ಕಮಗಳೂರು....
Last Updated : Aug 28, 2019, 11:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.