ETV Bharat / state

ಚಿಕ್ಕಮಗಳೂರು ನೆರೆ ಸಂತ್ರಸ್ತರ ಪಾಲಿಗಿಲ್ಲ ಗೌರಿ-ಗಣೇಶ ಸಂಭ್ರಮ.. - ನಿರಾಶ್ರಿತರ ಕೇಂದ್ರ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ 40 ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರ ಕೇಂದ್ರದಲ್ಲಿ ಬದುಕು ಸಾಗಿಸುತ್ತಿದ್ದಾರೆ. ನೆರೆ ಸಂತ್ರಸ್ತರ ಪಾಲಿಗೆ ಹಬ್ಬವೂ ಇಲ್ಲದಂತಾಗಿದೆ.

ನೆರೆ ಸಂತ್ರಸ್ತರ ಪಾಲಿಗಿಲ್ಲ ಗೌರಿ ಗಣೇಶ ಸಂಭ್ರಮ...
author img

By

Published : Sep 2, 2019, 11:04 PM IST

ಚಿಕ್ಕಮಗಳೂರು: ಇಂದು ದೇಶದೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ, ಜಿಲ್ಲೆಯಲ್ಲಿ ನಿರಾಶ್ರಿತರ ಕೇಂದ್ರದಲ್ಲಿ ಬದುಕು ಸಾಗಿಸುತ್ತಿರುವ ನೆರೆ ಸಂತ್ರಸ್ತರ ಪಾಲಿಗೆ ಏನೂ ಇಲ್ಲದಂತಾಗಿದೆ.

ಜಿಲ್ಲೆಯಲ್ಲಿ ಸುರಿದ ರಣಭೀಕರ ಮಳೆಯಿಂದ ಮೂಡಿಗೆರೆ ತಾಲೂಕಿನಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರ ಕೇಂದ್ರದಲ್ಲಿ ಬದುಕು ಸಾಗಿಸುತ್ತಿವೆ. ಇವರ ಪಾಲಿಗೆ ಹಬ್ಬವೂ ಇಲ್ಲದಂತಾಗಿದೆ. ಇವರಿಗೆ ಹಬ್ಬಕ್ಕಿಂತಲೂ ಹೊಸ ಬದುಕು ಕಟ್ಟಿಕೊಳ್ಳುವ ಆತಂಕವೇ ಹೆಚ್ಚಾಗಿದೆ.

ನೆರೆ ಸಂತ್ರಸ್ತರ ಪಾಲಿಗಿಲ್ಲ ಗೌರಿ ಗಣೇಶ ಸಂಭ್ರಮ..

ಕಳೆದ 23 ದಿನಗಳಿಂದ ನಿರಾಶ್ರಿತರ ಕೇಂದ್ರದಲ್ಲಿರುವ ಇವರು ಮುಂದಿನ ಬದುಕು ಕಾಣದೇ ಬದುಕು ದೂಡುತ್ತಿದ್ದಾರೆ. ಸರ್ಕಾರ ಬಾಡಿಗೆ ಮನೆ ಹುಡುಕಿ ಹೊರಡಿ ಅಂತಿದೆ. ಆದರೆ, ಎಲ್ಲಿಗೆ ಹೋಗೋದು, ಏನ್ ಮಾಡೋದು, 5 ಸಾವಿರ ರೂಪಾಯಿನಲ್ಲಿ ಹೇಗೆ ಬದುಕು ಸಾಗಿಸೋದು ಎಂಬ ಯೋಚನೆಯಲ್ಲಿ ಕಣ್ಣೀರಿಡುತ್ತಿದ್ದಾರೆ.

Intro:Kn_Ckm_07_No festival_av_7202347Body:ಚಿಕ್ಕಮಗಳೂರು :-

ಇಂದು ದೇಶದೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೇ ಮಲೆನಾಡಲ್ಲಿ ಹಬ್ಬದ ವಾತವರಣವೇ ಇಲ್ಲದಂತಾಗಿದೆ.ಮಲೆನಾಡಲ್ಲಿ ಸುರಿದ ರಣಭೀಕರ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಈ ವರ್ಷ ಹಬ್ಬದ ವಾತಾವರಣವೇ ಇಲ್ಲದಂತಾಗಿದೆ. ಮೂಡಿಗೆರೆ ತಾಲೂಕಿನಲ್ಲಿ 40 ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರ ಕೇಂದ್ರದಲ್ಲಿ ಬದುಕು ಸಾಗಿಸುತ್ತಿದ್ದು ಇವರ ಪಾಲಿಗೆ ಹಬ್ಬವೂ ಇಲ್ಲದಂತಾಗಿದೆ. ಇತ್ತ ಸಂಭ್ರಮವೂ ಇಲ್ಲದ ಪರಿಸ್ಥಿತಿಯಲ್ಲಿದ್ದು, ಹೊಸ ಬದುಕು ಕಟ್ಟಿಕೊಳ್ಳುವ ಆತಂಕವೇ ಹೆಚ್ಚಾಗಿ ಇವರ ಮುಂದೆ ಬಂದೂ ನಿಂತಿದೆ. ಮುಂದಿನ ಬದುಕು ಹೇಗೆ ಎಂಬುದೇ ಇವರಿಗೆ ಗೊತ್ತಾಗುತ್ತಿಲ್ಲ. ಕಳೆದ 23 ದಿನಗಳಿಂದ ನಿರಾಶ್ರಿತ ಕೇಂದ್ರದಲ್ಲಿರುವ ಜನ ಮುಂದಿನ ಬದುಕು ಕಾಣದೇ ಬದುಕು ದೂಡುತ್ತಿದ್ದಾರೆ. ಸರ್ಕಾರ ಬಾಡಿಗೆ ಮನೆ ಹುಡುಕಿ ಹೊರಡಿ ಅಂತಿದೆ. ಆದರೇ ಎಲ್ಲಿಗೆ ಹೋಗೋದು, ಏನ್ ಮಾಡೋದು, 5 ಸಾವಿರ ಹಣದಲ್ಲಿ ಹೇಗೆ ಬದುಕು ಸಾಗಿಸೋದು ಅಂತಾ ಯೋಚನೆಯಲ್ಲಿದ್ದಾರೆ.ಇತ್ತ ಹಬ್ಬದ ದಿನವೂ ಇಲ್ಲಿ ವಾಸವಾಗಿರುವ ಜನರು ಕಣ್ಣೀರು ಇಡುತ್ತಿದ್ದಾರೆ....

Conclusion:ರಾಜಕುಮಾರ್....
ಈ ಟಿವಿ ಭಾರತ್.....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.