ETV Bharat / state

ಎಂಎಲ್​ಸಿ ಚುನಾವಣೆ: ಬಿಜೆಪಿ ಟಿಕೆಟ್ ಆಕಾಂಕ್ಷಿ ತನ್ನತ್ತ ಸೆಳೆಯಲು ಮುಂದಾದ ಕಾಂಗ್ರೆಸ್ - ಆಪರೇಷನ್ ಕಮಲ

ಚಿಕ್ಕಮಗಳೂರು ಎಂಎಲ್​ಸಿ ಚುನಾವಣೆ (MLC election) ಹಿನ್ನೆಲೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ನಿರಂಜನ್‍ ಅವರನ್ನ ತನ್ನತ್ತ ಸೆಳೆಯಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ.

niranjan
ಈಟಿವಿ ಭಾರತದೊಂದಿಗೆ ಮಾತನಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಿರಂಜನ್‍
author img

By

Published : Nov 15, 2021, 9:12 AM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಎಂಎಲ್​ಸಿ ಚುನಾವಣೆಗೆ (MLC election) ಸ್ಪರ್ಧಿಸಲು ಕಾಂಗ್ರೆಸ್ಸಿಗರು ಮನಸ್ಸು ಮಾಡದ ಹಿನ್ನೆಲೆ ಕಾಂಗ್ರೆಸ್​, ಆಪರೇಷನ್ ಕಮಲದ (Operation lotus) ಮೂಲಕ ಬಿಜೆಪಿ ಟಿಕೆಟ್ ಆಕಾಂಕ್ಷಿಯನ್ನ ಕಾಂಗ್ರೆಸ್ ಚಿಹ್ನೆಯಡಿ ನಿಲ್ಲಿಸಲು ತೆರೆಮರೆ ಕಸರತ್ತು ನಡೆಸುತ್ತಿದೆ.

ಸದ್ಯಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ನಿರಂಜನ್‍ ಅವರನ್ನ ಕಾಂಗ್ರೆಸ್ ಸೆಳೆಯಲು ಮುಂದಾಗಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರಂಜನ್, ಒಂದು ಬಾರಿ ಫೋನ್ ಮಾಡಿ ಕರೆದಿರುವುದು ಸತ್ಯ. ಆದರೆ, ನಾನು ಬರಲ್ಲ ಎಂದು ಹೇಳಿದ್ದೇನೆ. 25 ವರ್ಷದಿಂದ ಬಿಜೆಪಿಗೆ ದುಡಿದಿದ್ದೇವೆ. ಈಗ ಹೋಗಲು ಮನಸ್ಸು ಒಪ್ಪುವುದಿಲ್ಲ ಎಂದರು.

ಈಟಿವಿ ಭಾರತದೊಂದಿಗೆ ಮಾತನಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಿರಂಜನ್‍

ಈಗಾಗಲೇ ಟಿಕೆಟ್ ನಮಗೆ ಸಿಗುವುದು ಖಚಿತವೆನಿಸಿದೆ. ಹಾಲಿ ಎಂ.ಎಲ್.ಸಿ. ಪ್ರಾಣೇಶ್ ಕೂಡ ನನಗೆ ಬೆನ್ನು ನೋವು ಇದೆ. ನಾನು ಚುನಾವಣೆಗೆ ನಿಲ್ಲುವುದಿಲ್ಲ. ನೀವು ರೆಡಿ ಮಾಡಿಕೊಳ್ಳಿ ಎಂದು ಅವರ ಮನೆಗೆ ಹೋಗಿದ್ದಾಗ ನನಗೆ ಹೇಳಿದ್ದಾರೆ. ಹಾಗಾಗಿ, ನಾನು ಕಳೆದ ಎರಡು ವರ್ಷಗಳಿಂದ ಎಲ್ಲ ರೀತಿಯಲ್ಲೂ ಸಿದ್ಧತೆ ನಡೆಸಿದ್ದೇನೆ. ನಾನು ಪ್ರಬಲವಾಗಿ ಟಿಕೆಟ್ ಕೇಳುತ್ತಿದ್ದೇನೆ. ನಮ್ಮ ಮನೆಗೆ ಯಡಿಯೂರಪ್ಪ ಬಂದಾಗ ನಾನು ಕೆಜೆಪಿ ಗೆ ಹೋಗಬಹುದಿತ್ತು. ಆದರೆ, ಪಕ್ಷ ಮುಖ್ಯ. ನಾನು ಆರ್.ಎಸ್.ಎಸ್.ನಲ್ಲಿ ಶಿಸ್ತಿನಿಂದ ಬೆಳೆದ ವ್ಯಕ್ತಿ, ಎಲ್ಲಿಗೂ ಹೋಗುವುದಿಲ್ಲ. ಬಿಜೆಪಿಯಲ್ಲಿ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.