ಚಿಕ್ಕಮಗಳೂರು: ದುಷ್ಕರ್ಮಿಗಳು ವ್ಯಕ್ತಿವೋರ್ವನನ್ನು ಕೊಲೆ ಮಾಡಿ ಮೃತದೇಹವನ್ನು ರಸ್ತೆಬದಿ ಎಸೆದು ಹೋಗಿರುವ ಘಟನೆ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ನಿವಾಸಿ ಹರೀಶ್ (32) ಕೊಲೆಯಾಗಿರೋ ವ್ಯಕ್ತಿ. ಬೇರೆಡೆ ಕೊಲೆ ಮಾಡಿ ಹರೀಶ್ ಮೃತದೇಹವನ್ನು ರಾತ್ರಿ ತಂದು ಹಳುವಳ್ಳಿ ಗ್ರಾಮದಲ್ಲಿ ಎಸೆಯಲಾಗಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತ ಹರೀಶ್ ದೇಹದಲ್ಲಿ ಬಂದೂಕಿನ ಗುಂಡುಗಳು ಹಾದು ಹೋಗಿರೋದು ಪತ್ತೆಯಾಗಿದ್ದು, ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿರೋ ಶಂಕೆ ಕಾಡುತ್ತಿದೆ. ಸದ್ಯ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.