ETV Bharat / state

ಚಿಕ್ಕಮಗಳೂರಿನಲ್ಲಿ ಮತ್ತೆ ಘರ್ಜಿಸಿದ ಬುಲ್ಡೋಜರ್​​ಗಳು: ಅಕ್ರಮ ಕಟ್ಟಡಗಳು ನೆಲ‌ಸಮ‌

ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.

Municipal staff has demolished the illegal buildings
ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ
author img

By

Published : Jun 20, 2022, 9:51 AM IST

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕ್ಷೇತ್ರದಲ್ಲಿ ಮತ್ತೆ ಬುಲ್ಡೋಜರ್ ಕಾರ್ಯಾಚರಣೆ ಆರಂಭವಾಗಿದೆ. ನಗರ ಸಭೆ ಸಿಬ್ಬಂದಿ ಜೆಸಿಬಿಗೆ ಪೂಜೆ ಮಾಡಿ, ಬಳಿಕ ಅಕ್ರಮ ಕಟ್ಟಡವನ್ನು ನೆಲ‌ಸಮ‌ ಮಾಡಿದ್ದಾರೆ.

ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ

ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣು ಗೋಪಾಲ್ ಹಾಗೂ ನಗರ ಸಭೆ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

ಕಳೆದ ವಾರ ಅಕ್ರಮ ಚಟುವಟಿಕೆಗಳನ್ನ ನಡೆಸುವ ಮನೆಗಳಿಗೆ ನಗರ ಸಭೆ ನೋಟಿಸ್ ನೀಡಿತ್ತು. ಅಕ್ರಮ ಕಟ್ಟಡ, ಒತ್ತುವರಿ, ಗೋಮಾಂಸ, ಮಾದಕ ದ್ರವ್ಯ ಮಾರಾಟ ಮಾಡುವವರ ಮನೆಗಳನ್ನ ತೆರವು ಮಾಡುವುದಾಗಿ ತಿಳಿಸಿತ್ತು. ಇದರ ಬೆನ್ನಲ್ಲೇ ಕಳೆದ 10 ದಿನಗಳಲ್ಲಿ 3ನೇ ಬಾರಿಗೆ ಚಿಕ್ಕಮಗಳೂರು ನಗರದಲ್ಲಿ ಜೆಸಿಬಿಗಳು ಘರ್ಜಿಸುತ್ತಿವೆ.

ಇದನ್ನೂ ಓದಿ: ಶಾಲಾ ಕಟ್ಟಡ ದುರಸ್ಥಿಗೆ ಒತ್ತಾಯ: ತುಮಕೂರಿನಲ್ಲಿ ಗ್ರಾಮಸ್ಥರಿಂದ ಉಪವಾಸ ಸತ್ಯಾಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.