ಚಿಕ್ಕಮಗಳೂರು: ನಗರದ ವಿವಿಧೆಡೆ ಅಂಗಡಿಗಳು, ಹೋಟೆಲ್‌ಗಳ ಮೇಲೆ ನಗರಸಭೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ 100 ಕೆಜಿ ಗೂ ಹೆಚ್ಚಿನ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಶುಚಿತ್ವ ಕಾಪಾಡಿಕೊಳ್ಳದ ಹೋಟೆಲ್ ಮಾಲೀಕರಿಗೆ ದಂಡ ವಿಧಿಸಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ರತ್ನಗಿರಿ ರಸ್ತೆ, ಉಪ್ಪಳ್ಳಿ, 60 ಅಡಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಲಕ್ಷ್ಮಿ ಕೆಫೆ, ಅನ್ನಪೂರ್ಣ ಹೋಮ್ ಮೇಡ್ ಘಟಕ, ರೆಹಮಾನಿಯ ಟ್ರೇಡರ್ಸ್ ಇನ್ನಿತರ ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಮಾರಾಟದ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ, ದಂಡ ವಿಧಿಸಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಅನ್ನಪೂರ್ಣ ಹೋಮ್ ಮೇಡ್ ಅಂಗಡಿ ಬಾಗಿಲು ಬಂದ್ ಮಾಡಿಸಿದ್ದು, ದಾಳಿ ವೇಳೆ ಪ್ರತಿ ಅಂಗಡಿಗಳಲ್ಲೂ ಸುಮಾರು 20 ಕೆ.ಜಿ ಗೂ ಅಧಿಕ ಪ್ರಮಾಣದ ಪ್ಲಾಸ್ಟಿಕ್ ಪತ್ತೆಯಾಗಿದೆ. ಕಳೆದ 10 ತಿಂಗಳಿನಿಂದ ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ನಗರಸಭೆ ಪ್ರಯತ್ನ ಮಾಡುತ್ತಿದ್ದು, ಪ್ಲಾಸ್ಟಿಕ್ ಬಳಸಿದರೆ ಅಂಗಡಿ ಪರವಾನಗಿ ಕೂಡಲೇ ರದ್ದುಗೊಳಿಸಿ, ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.
ಓದಿ: DAP ಹೆಸರಿನಲ್ಲಿ ಸಾವಯವ ಗೊಬ್ಬರ ಮಾರಾಟ: ಕೃಷಿ ಇಲಾಖೆ ಜಾಗೃತ ದಳದಿಂದ ದಾಳಿ