ಚಿಕ್ಕಮಗಳೂರು : ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪನವರು. ಬಿಜೆಪಿ ಪಕ್ಷವನ್ನು ಏಕಾಂಗಿಯಾಗಿ ಅಧಿಕಾರಕ್ಕೆ ತಂದವರು ಇವರು. ಇವರು ಮೂರು ಬಾರಿಯೂ ಸಿಂಗಲ್ಲಾಗಿ ಆಡಳಿತ ನಡೆಸಿದ್ದಾರೆ ಅಂತಾ ಹೇಳೋ ಮೂಲಕ ಮೂಡಿಗೆರೆಯ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಬಿಎಸ್ವೈ ಬೆಂಬಲಕ್ಕೆ ನಿಂತಿದ್ದಾರೆ.
ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಹೈಕಮಾಂಡ್ಗಿಂತ ನಾನು ದೊಡ್ಡವನಲ್ಲ. ನಾನು ಅವರ ಬಳಿ ಮನವಿ ಮಾಡುತ್ತಿದ್ದೇನೆ. ಮುಂಬರುವ ಚುನಾವಣೆವರೆಗೂ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ಇದರಿಂದ ಪಕ್ಷ ಗಟ್ಟಿಯಾಗುತ್ತದೆ ಎಂದು ಎಂ ಪಿ ಕುಮಾರಸ್ವಾಮಿ ಹೇಳಿದ್ದಾರೆ.
ಎಲ್ಲರಿಗೂ ಯಡಿಯೂರಪ್ಪನವರು ಬೇಕಾಗಿದ್ದಾರೆ. ಬಿಜೆಪಿಯಲ್ಲಿ ತುಂಬಾ ಜನರ ರಾಜಕೀಯ ಭವಿಷ್ಯ ಇದೆ. ಎರಡು ಬಜೆಟ್ ಕೊರೊನಾಗೆ ಬಲಿಯಾಗಿದೆ. ಇನ್ನು ಒಂದೂವರೆ ವರ್ಷದಲ್ಲಿ ನಾವು ಚುನಾವಣೆ ತಯಾರಿಗೆ ಹೋಗಬೇಕಿದೆ. ಯಡಿಯೂರಪ್ಪನವರಿದ್ದರೆ ಒಳ್ಳೆಯದು ಎಂದಿದ್ದಾರೆ.
ಇದನ್ನೂ ಓದಿ: ಮಹಾನ್ ಕಳ್ಳನ ಹಿಡಿಯಲು ರೈತರಾದ ಪೊಲೀಸರು.. ಯಾವ ಸಿನಿಮಾಗಿಂತ ಕಮ್ಮಿಯಿಲ್ಲ ಈ ಸ್ಟೋರಿ..
ಅವರು ಮಾಸ್ ಲೀಡರ್, ಜನರನ್ನು ಸೆಳೆಯುವಂಥ ನಾಯಕರು. ಯಡಿಯೂರಪ್ಪ ತುಂಬಾ ಅಪರೂಪದ ನಾಯಕರು. ಒಂದು ವೇಳೆ ಅವರನ್ನು ಬದಲಾವಣೆ ಮಾಡಿದರೆ ಪಕ್ಷಕ್ಕೆ ತುಂಬಲಾರದ ನಷ್ಟ ಆಗುತ್ತದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಾನು ತಿಳಿದುಕೊಂಡಿದ್ದೇನೆ ಎಂದು ಎಂ ಪಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.