ಚಿಕ್ಕಮಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ರೇಸ್ಗಳಿಗೆ ಬ್ರೇಕ್ ಬಿದ್ದಿತ್ತು. ಇದೀಗ ಪುನಾರಂಭಗೊಂಡಿದ್ದು, ಜಿಲ್ಲೆಯ ಎನ್.ಆರ್.ಪುರದ ಅಡ್ವೆಂಚರ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಮಡ್ ರೇಸ್ ನೋಡಿ ಸಾವಿರಾರು ಪ್ರೇಕ್ಷಕರು ಸಖತ್ ಎಂಜಾಯ್ ಮಾಡಿದರು.
ಮಹೀಂದ್ರಾ 4x4, ಬೊಲೆರೋ, ಜಿಪ್ಸಿ, ಪಜೆರೋ, ಮಿತ್ಸುಬಾ ಸೇರಿದಂತೆ ವಿವಿಧ ಜೀಪ್ಗಳು ಮಡ್ ರೇಸ್ಗೆ ಮೆರಗು ತಂದವು. ಕಿರಿದಾದ ಅಖಾಡದಲ್ಲಿ ರುಯ್.. ರುಯ್.. ಎಂದು ವಾಹನಗಳು ಸಾಗುತ್ತಿದ್ರೆ, ಸ್ಪರ್ಧಾಳುಗಳ ಮೈನವಿರೇಳಿಸುವ ಪ್ರದರ್ಶನ ನೋಡುತ್ತ ಜನರು ವೀಕೆಂಡ್ ಮಜಾ ಅನುಭವಿಸಿದರು.
ಅಖಾಡದಲ್ಲಿ ಕೇರಳ, ಚೆನ್ನೈ, ತಮಿಳುನಾಡಿನ ಡ್ರೈವರ್ಗಳಿಗೆ ರಾಜ್ಯದ ಚಿಕ್ಕಮಗಳೂರು, ಬೆಂಗಳೂರು, ಮೈಸೂರು, ಬೆಳಗಾಂ, ಹಾಸನ, ಮಂಗಳೂರು, ಕೊಡಗು ಹಾಗೂ ತುಮಕೂರಿನ ಸ್ಫರ್ಧಿಗಳು ಸವಾಲೊಡ್ಡಿದರು. 110ಕ್ಕೂ ಹೆಚ್ಚು ಚಾಲಕರು ಜಾರುವ ಟ್ರ್ಯಾಕ್, ಉಬ್ಬು, ತಗ್ಗುಗಳ ನಡುವೆ ಜೀಪು ಚಲಾಯಿಸಿ ಗೆಲುವಿಗಾಗಿ ಪೈಪೋಟಿ ನಡೆಸಿದರು. ಸ್ಥಳೀಯ ಶಾಸಕ ಟಿ.ಡಿ. ರಾಜೇಗೌಡ ಕೂಡ ರೇಸ್ನಲ್ಲಿ ಸ್ಪರ್ಧಿಸಿದ್ದು ಎಲ್ಲರ ಗಮನ ಸೆಳೆಯಿತು.
ಇದನ್ನೂ ಓದಿ: ಮೋದಿ ಕಾರ್ಯಕ್ರಮದಿಂದ ಕೊರೊನಾ ಹರಡಲ್ವಾ ಎಂಬ ಪ್ರಶ್ನೆಗೆ ಸಿಟ್ಟಾದ್ರಾ ಸಿಎಂ!?