ಚಿಕ್ಕಮಗಳೂರು : ಇವತ್ತಿನದ್ದು ಕೇವಲ ರೈತರ ಬಂದ್ ಅಲ್ಲ, ರೈತರನ್ನ ದಿಕ್ಕು ತಪ್ಪಿಸುವಂತಹ ರಾಜಕೀಯ ಪಕ್ಷಗಳ ಬಂದ್ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರೈತರ ವಿರೋಧವಾಗಿ ಉಳಿದಿಲ್ಲ, ಮೋದಿ ಸರ್ಕಾರದ ವಿರೋಧದ ಬಂದ್ ಆಗಿದೆ. ಉಗ್ರ ಸಂಘಟನೆಗಳು ಭಾರತವನ್ನ ಇಬ್ಭಾಗ ಮಾಡಲು ರೈತರನ್ನು ಎತ್ತಿಕಟ್ಟುವ ಷಡ್ಯಂತ್ರ ಮಾಡುತ್ತಿವೆ. ಶಾಯಿನ್ ಭಾಗ್ನಲ್ಲಿ ಯಾರು ಹೋರಾಟ ಮಾಡುತ್ತಿದ್ದರೋ ಅವರೇ ಇಲ್ಲಿ ಭಾಗವಹಿಸಿದ್ದಾರೆ.
ಶಾಂತಿಯುತ ಹೋರಾಟವನ್ನ ಕೇಂದ್ರ ಸರ್ಕಾರ ಗೌರವಿಸುತ್ತದೆ. ಶಾಯಿನ್ ಭಾಗ್ನಲ್ಲಿ ಸಿಎಎ ವಿರುದ್ಧ ಹೋರಾಡಿದವರ ಮಾತನ್ನ ಕೇಳಲು ಕೇಂದ್ರ ಸಿದ್ಧವಿಲ್ಲ. ಪಂಜಾಬ್ನಲ್ಲಿ ಸರ್ಕಾರವೇ ದಲ್ಲಾಳಿಗಳ ಪರ ಕೆಲಸ ಮಾಡುತ್ತಿದೆ. ಇದರಿಂದ ನಮ್ಮ ರೈತರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದರು.
ನಂತರ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದ ಅವರು, ಭಯೋತ್ಪಾದಕರು, ದೇಶ ಇಬ್ಭಾಗ ಮಾಡುವವರ ಜೊತೆಯೂ ಸೇರಲು ಕಾಂಗ್ರೆಸ್ ಸಿದ್ಧವಿದೆ. ದೇಶದ ಸಂಸದರಿಗೆ ಈ ರೀತಿಯ ವಾಯ್ಸ್ ಮೆಸೇಜ್ ಬರುತ್ತಿದ್ದು, ನಾವು ಖಲಿಸ್ಥಾನ ಮೂಮೆಂಟಿನವರು ಎಂದು ಮೆಸೇಜ್ ಬರುತ್ತಿದೆ.
ಭಾರತ ಸೈನಿಕರು ಭಾರತದ ವಿರುದ್ಧ ತಿರುಗಿ ಬೀಳಬೇಕು ಅಂತಾ ಷಡ್ಯಂತ್ರ ನಡೆಸಲಾಗ್ತಿದೆ. ಪಂಜಾಬಿನ ಪೊಲೀಸರು ಭಾರತದ ವಿರುದ್ಧ ತಿರುಗಿ ಬೀಳಬೇಕು ಎಂದು ವಾಯ್ಸ್ ಮೇಸೇಜ್ ನಮಗೆ ಕಳಿಸುತ್ತಾರೆ.
ಓದಿ: ರೈತರಿಗೆ ಅನ್ಯಾಯವಾಗುವ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ: ಸಿಎಂ ಬಿಎಸ್ವೈ
ಖಲಿಸ್ಥಾನ ಮೂಮೆಂಟ್ ಬೇರೆ ದೇಶದಲ್ಲಿ ಇನ್ನೂ ಜೀವಂತವಿದೆ. ಇದಕ್ಕೆ ಎಲ್ಲರೂ ಸೇರಿ ಜೀವ ಕೊಡುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ, ಮೋದಿ ವಿರೋಧಿಸಲು ಇದರಲ್ಲಿ ಭಾಗಿಯಾಗಿದ್ದು, ನಿಜಕ್ಕೂ ಇದು ನಾಚಿಕೆಗೇಡಿನ ಸಂಗತಿ ಎಂದರು.