ETV Bharat / state

ಸೇಡು ತೀರಿಸಿಕೊಂಡ ಕೋತಿ.. ಮೂಡಿಗೆರೆಯಲ್ಲಿ ರೇಗಿಸಿದ ವ್ಯಕ್ತಿಯ ಕೈಯನ್ನೇ ಕಚ್ಚಿದ ಮಂಗ.. - monkey bites auto driver in Mudigere talluk

ಮಂಗನಿಗೆ ಹೆದರಿದ ಜಗದೀಶ್ ಆಟೋ-ಕಾರುಗಳ ಬಳಿ ಹೋಗಿ ಕದ್ದು ಕೂತಿದ್ದರು. ಆದರೆ, ಅಲ್ಲಿಗೂ ಹುಡುಕಿಕೊಂಡು ಹೋದ ಕೋತಿ ಆಟೋವನ್ನು ಪತ್ತೆ ಹಚ್ಚಿ, ಸೇಡು ತೀರಿಸಿಕೊಂಡಿದೆ..

monkey-bites-to-auto-driver-in-mudigere-talluk
ಕೋತಿ
author img

By

Published : Sep 17, 2021, 8:07 PM IST

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ರೇಗಿಸಿದವನ ವಿರುದ್ಧ ರೊಚ್ಚಿಗೆದ್ದ ಕೋತಿಯೊಂದು ಆತನನ್ನು ಹುಡುಕಿ ಕಚ್ಚಿ ಗಾಯಗೊಳಿಸಿದೆ. ಈ ಕೋತಿ ಕೊಟ್ಟಿಗೆಹಾರದ ಮೊರಾರ್ಜಿ ದೇಸಾಯಿ ಹಾಸ್ಟೆಲ್​ಗೆ ಬಂದಿತ್ತು. ಆಟೋ ಚಾಲಕ ಜಗದೀಶ್ ಎಂಬುವರು ಕೋತಿಗೆ ರೇಗಿಸಿದ್ದರು. ಇದರಿಂದ ಕೋಪಗೊಂಡ ಕೋತಿ ಅವರ ಬೆನ್ನು ಹತ್ತಿ ಕೈಗೆ ಕಚ್ಚಿದೆ.

ಮಂಗನಿಗೆ ಹೆದರಿದ ಜಗದೀಶ್ ಆಟೋ-ಕಾರುಗಳ ಬಳಿ ಹೋಗಿ ಕದ್ದು ಕೂತಿದ್ದರು. ಆದರೆ, ಅಲ್ಲಿಗೂ ಹುಡುಕಿಕೊಂಡು ಹೋದ ಕೋತಿ ಆಟೋವನ್ನು ಪತ್ತೆ ಹಚ್ಚಿ, ಸೇಡು ತೀರಿಸಿಕೊಂಡಿದೆ. ಈ ವೇಳೆ ಮಂಗನನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನಪಟ್ಟಿದ್ದಾರೆ. ಆಗ ಅವರ ಕೈಗೂ ಸಿಗದೆ ಪರಾರಿಯಾಗಿದೆ.

ಓದಿ: ದೇಗುಲಗಳಲ್ಲಿ ವಸ್ತುಗಳ ಕಳ್ಳತನ : ಮೂವರು ಖದೀಮರು ಅಂದರ್, ಓರ್ವ ಎಸ್ಕೇಪ್​ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.