ಚಿಕ್ಕಮಗಳೂರು: ಚಿಲ್ಲರೆ ಅಂಗಡಿಯಲ್ಲಿ ಸಿಗರೇಟ್ ತೆಗೆದುಕೊಳ್ಳಲು ಬಂದ ಗ್ರಾಹಕನೋರ್ವ ಅಂಗಡಿ ಮಾಲೀಕನ ಮೊಬೈಲ್ ಕದ್ದಿರುವ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಸಬ್ಬೇನಹಳ್ಳಿಯಲ್ಲಿ ನಡೆದಿದೆ.
ಸಬ್ಬೇನಹಳ್ಳಿಯ ಅಂಗಡಿಯೊಂದಕ್ಕೆ ಬಂದ ಗ್ರಾಹಕನೊಬ್ಬ 20 ರೂಪಾಯಿ ನೀಡಿ, ಸಿಗರೇಟ್ ನೀಡುವಂತೆ ಹೇಳಿದ್ದಾನೆ. ಅಂಗಡಿ ಮಾಲೀಕ ಆತನಿಗೆ ಸಿಗರೇಟ್ ಕೊಟ್ಟು, ತನ್ನ ಪಾಡಿಗೆ ಕೆಲಸ ಮಾಡುತ್ತಿದ್ದ. ಈ ವೇಳೆ ಮಾಲೀಕನ ಗಮನಿಸಿದ ಗ್ರಾಹಕ, ನಿಧಾನವಾಗಿ ಮೊಬೈಲ್ ಕದ್ದು ಪರಾರಿಯಾಗಿದ್ದ.
ಬಳಿಕ ಅಂಗಡಿ ಮಾಲೀಕ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಗ್ರಾಹಕ ಮೊಬೈಲ್ ಕದ್ದಿರುವುದು ಬೆಳಕಿಗೆ ಬಂದಿದೆ. ಸದ್ಯ, ಆರೋಪಿಯನ್ನ ಬಂಧಿಸಿರುವ ಬಣಕಲ್ ಪೋಲಿಸರು, ಪ್ರಕರಣ ದಾಖಲಿಕೊಂಡಿದ್ದಾರೆ.