ETV Bharat / state

ನಾವು ಹಗಲುಗನಸನ್ನು ನನಸು ಮಾಡುವ ಜನ: ಸಾಂದರ್ಭಿಕ ಶಿಶುವಿಗೆ ಸಿ ಟಿ ರವಿ ಟಾಂಗ್​ - Kannada news

ಆನಂದ್​ ಸಿಂಗ್​ ರಾಜೀನಾಮೆಗೆ ಅವರದೇ ಆದ ರಾಜಕೀಯ ಕಾರಣಗಳಿರಬಹುದು. ಜಿಂದಾಲ್ ಭೂಮಿ ಪರಭಾರೆ ವಿರೋಧಿಸಿ ಚಳವಳಿ ಮಾಡುವುದಾಗಿ ಹೇಳಿದ್ದರು. ಸದ್ಯ ಕಾಂಗ್ರೆಸ್​ ರಾಷ್ಟ್ರೀಯ​ ಅಧ್ಯಕ್ಷರೇ ಹತಾಶ ಸ್ಥಿತಿಯಲ್ಲಿರುವಾಗ ಆ ಪಕ್ಷದ ಶಾಸಕರಿಗೂ ಭಯ ಕಾಡುತ್ತಿದೆ ಎಂದು ಶಾಸಕ ಸಿ ಟಿ ರವಿ ಹೇಳಿದ್ರು. ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರ ಟ್ವೀಟ್​​ ವಿಚಾರಕ್ಕೆ ಸಂಬಂಧಿಸಿದಂತೆ ರವಿ ಟಾಂಗ್​ ಕೊಟ್ಟಿದ್ದಾರೆ.

ಶಾಸಕ ಸಿ ಟಿ ರವಿ
author img

By

Published : Jul 1, 2019, 5:54 PM IST

ಚಿಕ್ಕಮಗಳೂರು: ಶಾಸಕ ಆನಂದ್ ಸಿಂಗ್ ಯಾವ ಕಾರಣಕ್ಕಾಗಿ ರಾಜೀನಾಮೇ ನೀಡಿದ್ದಾರೆ ಎಂಬುದು ಗೊತ್ತಿಲ್ಲವೆಂದು ಚಿಕ್ಕಮಗಳೂರಿನ ಶಾಸಕ ಸಿ ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಆನಂದ್ ಸಿಂಗ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ಆನಂದ್ ಸಿಂಗ್ ಅವರಿಗೆ ಫೋನ್ ಮಾಡಿದ್ದೆ. ಅದರೆ ಸ್ವಿಚ್​ ಆಫ್​ ಆಗಿದೆ, ರಾಜೀನಾಮೆಗೆ ಅವರದೇ ಆದ ರಾಜಕೀಯ ಕಾರಣಗಳಿರಬಹುದು. ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ವಿರೋಧಿಸಿ ಚಳವಳಿ ಮಾಡುವುದಾಗಿ ಹೇಳಿದ್ದರು. ಅದೇ ಕಾರಣಕ್ಕೆ ರಾಜೀನಾಮೆ ನೀಡಿರಬಹುದು. ಇನ್ನು ಎಐಸಿಸಿ ಅಧ್ಯಕ್ಷರೇ ​ಹತಾಶ ಮನಸ್ಥಿತಿಯಲ್ಲಿದ್ದು, ಅವರ ರಾಜೀನಾಮೆ ನಿರ್ಧಾರದಿಂದ ಕಾಂಗ್ರೆಸ್​​ನ ಶಾಸಕರೆಲ್ಲರೂ ರಾಜೀನಾಮೆ ನೀಡುತ್ತಿದ್ದಾರೆ ಎಂದರು.

ಶಾಸಕ ಸಿ ಟಿ ರವಿ, ಶಾಸಕ

ಕಾಂಗ್ರೆಸ್​​ನಲ್ಲಿ ರಾಜಕೀಯ ಭವಿಷ್ಯ ಇಲ್ಲ ಅಂತ ಅವರಿಗೆ ಹತಾಶೆ ಭಾವನೆ ಮೂಡಿದ್ದರೆ ನಾವು ಏನು ಮಾಡಲು ಸಾಧ್ಯ ಎಂದು ರವಿ ಪ್ರಶ್ನಿಸಿದರು. ಇನ್ನು ಬಿಜೆಪಿ ಪ್ರಯತ್ನ ನಿರಂತರ ಹಗಲುಗನಸು ಎಂದು ಟ್ವೀಟ್​ ಮಾಡಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್​ ನೀಡಿರುವ ಸಿ ಟಿ ರವಿ, ನಾವು ಹಗಲುಗನಸನ್ನು ನನಸು ಮಾಡುವ ಜನ. ಸಿಎಂ ಕಾಕತಾಳೀಯವಾಗಿ ಸಾಂದರ್ಭಿಕ ಶಿಶು ಅಂತಾ ಹೇಳಿಕೊಂಡಿದ್ದರು ಎಂದು ಕಾಲೆಳೆದರು.

ಜೆಡಿಎಸ್ ನವರಿಗೆ ಕಾಂಗ್ರೆಸ್​​ನವರ ಮೇಲೆ ನಂಬಿಕೆಯಿಲ್ಲ. ಇಬ್ಬರು ಪಕ್ಷೇತರರನ್ನು ಸಚಿವರನ್ನಾಗಿ ಮಾಡಿ ತೆಗೆದು, ಈಗ ಮತ್ತೆ ಸಚಿವಸ್ಥಾನ ನೀಡಿದ್ದಾರೆ. ಅದು ನಾವು ಹೇಳಿದ್ದಲ್ಲ ಹಾಗಂತ ಬಿ ಸಿ ಪಾಟೀಲ್ ಅಸಮಾಧಾನ ಹೊರಹಾಕಿದ್ದರು ಎಂದರು.

ರಮೇಶ್ ಜಾರಕೀಹೊಳಿ ಅವರಿಗೆ ಡಿ ಕೆ ಶಿವಕುಮಾರ್ ಅವರ ಮೇಲೆ ಅಸಮಾಧಾನ ಇದೆ, ಜಿಂದಾಲ್ ವಿಷಯದಲ್ಲಿ ಸರ್ಕಾರ ತಪ್ಪು ಮಾಡುತ್ತಿದೆ ಅಂತ ಆನಂದ್ ಸಿಂಗ್ ಹೇಳಿದ್ದಾರೆ. ಅದಕ್ಕೆ ಅವರು ರಾಜೀನಾಮೆ ನೀಡಿರಬಹುದು. ಸದ್ಯದ ಪರಿಸ್ಥಿತಿಗೆ ಮೈತ್ರಿ ಸರ್ಕಾರವೇ ಹೊಣೆ ಬಿಜೆಪಿಯಲ್ಲ ಎಂದು ಶಾಸಕ ಸಿ ಟಿ ರವಿ ಸ್ಪಷ್ಟಪಡಿಸಿದರು.

Intro:R_Kn_Ckm_01_Mla Ct Ravi_av_7202347Body:

ಚಿಕ್ಕಮಗಳೂರು :-

ಶಾಸಕ ಆನಂದ್ ಸಿಂಗ್ ಕಾಂಗ್ರೇಸ್ ಸದಸ್ಯರಾಗಿದ್ದಾರೆ.ಈ ಹಿಂದೇ ಬಿಜೆಪಿಯಲ್ಲಿದ್ದರು.ಅವರು ಯಾವ ಕಾರಣಕ್ಕಾಗಿ ರಾಜೀನಾಮೇ ನೀಡಿದ್ದಾರೆ ಎಂಬುದು ಗೊತ್ತಿಲ್ಲ.ಎಂದೂ ಚಿಕ್ಕಮಗಳೂರಿನ ಶಾಸಕ ಸಿ ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.ಆನಂದ್ ಸಿಂಗ್ ಅವರಿಗೆ ಪೋನ್ ಮಾಡಿದೆ ಆದರೇ ಎರಡೂ ಪೋನ್ ನಂ ಸ್ವೀಚ್ ಆಫ್ ಆಗಿದೆ.ಅವರದೇ ಆದಂತಹ ರಾಜಕೀಯ ಕಾರಣಗಳು ಇರಬಹುದು.ಅವರ ಕ್ಷೇತ್ರದಲ್ಲಿ ಜಿಂದಾಲ್ ಗೆ ಪರಬಾರೆ ಮಾಡುತ್ತಿರುವ ಭೂಮಿಯನ್ನು ವಿರೋಧಿಸಿ ಚಳುವಳಿ ಮಾಡುತ್ತೇನೆ ಎಂದೂ ವಿರೋಧ ಮಾಡಿದ್ದರು.ನನ್ನಗೆ ಗೊತ್ತಿಲ್ಲ. ಹತಾಶ ಸ್ಥಿತಿಯಲ್ಲಿ ಕಾಂಗ್ರೇಸ್ ಪಾರ್ಟಿ ಇದೆ. ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಅವರು ಕೊಟ್ಟ ಮೇಲೆ ಸರಣಿ ಪ್ರಮಾಣದಲ್ಲಿ ಸದಸ್ಯರು ರಾಜೀನಾಮೆ ಕೊಡುತ್ತಿದ್ದಾರೆ.ಕಾಂಗ್ರೇಸ್ ನಲ್ಲಿ ರಾಜಕೀಯ ಭವಿಷ್ಯ ಇಲ್ಲ ಅಂತಿದ್ರೆ ಅವರ ತೀರ್ಮಾನ. ರಾಷ್ಟ್ರೀಯ ಅಧ್ಯಕ್ಷರಿಗೆ ಒಂದು ಹತಾಶೆ ಬಂದಿರಬೇಕಾದ್ರೆ ಅವರಿಗೆ ನಂಬಿಕೆ ಇಲ್ಲದಿದ್ದಾಗ ಈ ಪಕ್ಷದಲ್ಲಿ ಇದ್ದಾಗ ಉದ್ದಾರ ಆಗೋಲ್ಲ ಅಂತಿದ್ರೆ ನಾವು ಏನು ಮಾಡಲು ಸಾಧ್ಯ. ನಾವು ಹಗಲು ಕನಸು ನನಸು ಮಾಡುವ ಜನ.ಅವರು ಕಾಕತಾಳೀಯವಾಗಿ ಸಾಂಧರ್ಭಿಕ ಶಿಶು ಎಂದೂ ಹೇಳಿದ್ದಾರೆ. ನಮ್ಮಗೆ ಕನಸು ನನಸು ಮಾಡುವ ಇಚ್ಚಾ ಶಕ್ತಿ ಇದೆ.ನಾವು ಆಪರೇಷನ್ ಕಮಲ ಮಾಡುತ್ತಿಲ್ಲ. ನಮ್ಮ ಕೆಲಸ ಸರ್ಕಾರ ಉಳಿಸೋದಲ್ಲ. ಉಳಿಸಿಕೊಳ್ಳೋದು ಅವರ ಕೈಯಲ್ಲಿದೆ.ದಿನ ಬೆಳಗ್ಗೆ ಆದರೇ ಅವರೇ ಟೀಕೆ ಮಾಡುತ್ತಿರೋದು. ಅವರ ಮೇಲೆ ಜನರಿಗೆ ವಿಶ್ವಾಸ ಇಲ್ಲ. ಕಾಂಗ್ರೇಸ್ ಗೆ ಜೆಡಿಎಸ್ ಸರ್ಕಾರ ನಡೆಸುತ್ತಿರೋದು ಇಷ್ಟ ಇಲ್ಲ. ಜೆಡಿಎಸ್ ಅವರಿಗೆ ಕಾಂಗ್ರೇಸ್ ನವರ ಮೇಲೆ ಇಷ್ಟ ಇಲ್ಲ. ಇಬ್ಬರೂ ಪಕ್ಷೇತರರಿಗೆ ಮಂತ್ರಿ ಮಾಡಿ ತೆಗೆದರು. ಈಗ ಮತ್ತೆ ಮಾಡಿದ್ದಾರೆ. ಅದು ನಾವು ಹೇಳಿದ್ದಲ್ಲಾ. ಬಿ ಸಿ ಪಾಟೀಲ್ ಅವರಿಗೆ ಇರುವ ಅಸಮಾಧಾನ ಮಂತ್ರಿ ಮಾಡಿಲ್ಲ ಎಂದು. ರಮೇಶ್ ಜಾರಕೀಹೊಳಿ ಅವರಿಗೆ ಡಿಕೆ ಶಿವಕುಮಾರ್ ಅವರ ಮೇಲೆ ಅಸಮಾಧಾನ ಇದು ನಮ್ಮ ಕೆಲಸ ಅಲ್ಲ. ಅದರ ಹೊಣೆ ಅವರೇ ಹೊರಬೇಕು ಎಂದೂ ಚಿಕ್ಕಮಗಳೂರಿನಲ್ಲಿ ಶಾಸಕ ಸಿ ಟಿ ರವಿ ಆನಂದ್ ಸಿಂಗ್ ರಾಜೀನಾಮೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು........

Conclusion:ರಾಜಕುಮಾರ್.....
ಈ ಟಿವಿ ಭಾರತ್......
ಚಿಕ್ಕಮಗಳೂರು.......
ETV Bharat Logo

Copyright © 2025 Ushodaya Enterprises Pvt. Ltd., All Rights Reserved.