ಚಿಕ್ಕಮಗಳೂರು : ಮಾಜಿ ಶಾಸಕ ವೈಎಸ್‌ವಿ ದತ್ತಾ ಅವರು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಮಾಡುವ ಪಾಠಕ್ಕೆ ಮನಸೋತ ಶಿಕ್ಷಣ ಸಚಿವ ಸುರೇಶ್ ಕುಮಾರ್, ಮೇಷ್ಟ್ರಿಗೆ ಪತ್ರ ಬರೆಯುವ ಮೂಲಕ ಸಲಾಂ ಹೇಳಿದ್ದಾರೆ. ದತ್ತಾ ಮೇಷ್ಟ್ರು ಮಾಡುವ ಪಾಠವನ್ನು ಗಮನಿಸಿದ ಸಚಿವರು ಈ ರೀತಿ ಪತ್ರ ಬರೆದಿದ್ದಾರೆ.
ನಾವಿಬ್ಬರು ಭೇಟಿಯಾದಾಗಲೆಲ್ಲಾ ಮಕ್ಕಳ ಕಲಿಕಾ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೆವು. ಆದರೆ, ನೀವು ಆನ್ಲೈನ್ನಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಟ್ಯೂಷನ್ ತೆಗೆದುಕೊಳ್ಳುವುದರ ಮೂಲಕ ಮತ್ತೊಮ್ಮೆ ದತ್ತಾ ಮೇಷ್ಟ್ರು ಆಗಿದ್ದೀರಿ.
ನಿಮ್ಮ ಈ ಕಾಳಜಿ ನಿಜಕ್ಕೂ ಮೆಚ್ಚುವಂತಹದ್ದು. ಸದಾ ಜನರ ಮಧ್ಯೆ ಇರುವ ನೀವು ನಿಮ್ಮ ಪ್ರೀತಿಯ ಹವ್ಯಾಸವಾದ ಟ್ಯೂಷನ್ ಕೆಲಸವನ್ನು ಲಾಕ್‌ಡೌನ್ ಅವಧಿಯಲ್ಲಿ ಮಾಡಿಕೊಂಡು ಬಂದಿದ್ದು, ಈ ಮೂಲಕ ನಿಮ್ಮಲ್ಲಿ ಒಬ್ಬ ಶಿಕ್ಷಕ ಪ್ರಖರವಾಗಿ ಜೀವಂತವಾಗಿದ್ದಾನೆ ಎಂದು ತೋರಿಸಿಕೊಟ್ಟಿದೆ.
ಶಿಕ್ಷಣ ಮತ್ತು ಮಕ್ಕಳ ಕುರಿತ ನಿಮ್ಮ ಕಾಳಜಿಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ. ನಿಮ್ಮಲ್ಲಿರುವ ಶಿಕ್ಷಕ ಸದಾ ಹಸಿರಾಗಿರಲ್ಲಿ ಎಂದು ಹೇಳುವುದರ ಮೂಲಕ ಸಚಿವ ಸುರೇಶ್ ಕುಮಾರ್ ಅವರು ದತ್ತಾ ಮೇಷ್ಟ್ರಿಗೆ ಸಲಾಂ ಹೇಳಿದ್ದಾರೆ.