ETV Bharat / state

ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಅಭಯ ತುಂಬಿದ ಸಚಿವ ಅಶೋಕ್​ - ಸಂತ್ರಸ್ತರಿಗೆ ಅಭಯ

ಚಿಕ್ಕಮಗಳೂರಿನಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Minister R.Ashok visit the Flood affected areas
author img

By

Published : Sep 20, 2019, 2:48 AM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮಹಾ ಮಳೆಯಿಂದ ಉಂಟಾದ ಭೂ ಕುಸಿತ ಮತ್ತು ಮನೆ ಕುಸಿತದ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಮೂಡಿಗೆರೆ-ಸಬ್ಲಿಯಲ್ಲಿ ನೆರೆಯಿಂದ ಉಂಟಾದ ಹಾನಿ ವೀಕ್ಷಿಸಿದ ಅವರು ಬಳಿಕ ಬಾಳೂರು ಹೊರಟ್ಟಿ, ಮಧುಗುಂಡಿ, ಚೆನ್ನಹಡ್ಲು ಹಾಗೂ ಮಲೆಮಲೆ ಗ್ರಾಮಗಳಿಗೆ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಅಲ್ಲಿನ ನೆರೆ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡಿದ್ದಾರೆ.

ನೆರೆ ಪ್ರದೇಶಗಳಿಗೆ ಭೇಟಿ ನೀಡಿದ ಕಂದಾಯ ಸಚಿವ ಅಶೋಕ್​

ಜಿಲ್ಲಾಧಿಕಾರಿಗಳ ಪರಿಹಾರ ನಿಧಿ ಖಾತೆಯಲ್ಲಿ ಅನುದಾನವಿದ್ದು, ಹಾನಿಗೊಳಗಾಗಿರುವ ಪ್ರದೇಶಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಹಣ ಬಿಡುಗಡೆ ಮಾಡಲಾಗುವುದು. ಕೇಂದ್ರ ಸರ್ಕಾರದ ಬೆಳೆ ಹಾನಿ ಪರಿಹಾರ ನಾಲ್ಕೈದು ದಿನಗಳಲ್ಲಿ ಬರಲಿದೆ ಎಂದು ಭರವಸೆ ನೀಡಿದರು.

ಪ್ರವಾಹದಿಂದ ಶೇ.80ರಷ್ಟು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಶೀಘ್ರ ₹1 ಲಕ್ಷ ಪರಿಹಾರ ನೀಡಲಾಗುವುದು. ಈ ಹಣವನ್ನು ಸಂತ್ರಸ್ತರಿಗೆ ನೇರವಾಗಿ ನೀಡುವುದರಿಂದ ತಮ್ಮ ಮನೆಗಳ ದುರಸ್ತಿ ಕಾರ್ಯಗಳನ್ನು ಸುಲಭವಾಗಿ ಕೈಗೊಳ್ಳಬಹುದು. ಸಂತ್ರಸ್ತರ ಮಕ್ಕಳಿಗೆ ಅವಶ್ಯವಿರುವ ಶಿಕ್ಷಣವನ್ನು ಒದಗಿಸಬೇಕು ಹಾಗೂ ಆ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಅನುತ್ತೀರ್ಣ ಮಾಡಬಾರದು ಎಂದು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಮಳೆಯಿಂದ ನೊಂದ ಸಂತ್ರಸ್ತರಿಗೆ ನೂರು ದಿನಗಳ ನರೇಗಾದ ವತಿಯಿಂದ ಕೆಲಸ ಒದಗಿಸಲಾಗುವುದು ಎಂದು ಸಚಿವರು ಹೇಳಿದರು.

Intro:Kn_Ckm_06_Spot visit_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಒಂದು ವಾರಗಳ ಸುರಿದ ಮಹಾ ಮಳೆಯಿಂದಾ ತಾಲೂಕಿನಲ್ಲಿ ಉಂಟಾದ ಭೂ ಕುಸಿತ ಹಾಗೂ ಗುಡ್ಡ ಕುಸಿತ, ಮನೆ ಕುಸಿತದ ಪ್ರದೇಶಗಳಿಗೆ ಸಚಿವ ಆರ್ ಅಶೋಕ್ ಇಂದೂ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಮೂಡಿಗೆರೆಯಿಂದಾ ಸಬ್ಲಿಯಿಂದಾ ನೆರೆ ವೀಕ್ಷಣೆ ಮಾಡಿದ ಸಚಿವರು ಆ ಮುಖಾಂತರ ಬಾಳೂರು ಹೊರಟ್ಟಿ, ಮಧುಗುಂಡಿ,ಚೆನ್ನಹಡ್ಲು ಹಾಗೂ ಮಲೆಮಲೆ ಗ್ರಾಮಗಳಿಗೆ ಭೇಟಿ ನೀಡಿ ಭೂ ಕುಸಿತ ಹಾಗೂ ಗುಡ್ಡ ಕುಸಿತ ವೀಕ್ಷಣೆ ಮಾಡಿದ್ದು ಇದೇ ಸಂದರ್ಭದಲ್ಲಿ ಗ್ರಾಮಸ್ಥರನ್ನು ಬೇಟಿಯಾಗಿ ಅವರಿಗೆ ಧೈರ್ಯ ತುಂಬಿದರು.ಜಿಲ್ಲಾಧಿಕಾರಿಗಳ ಪರಿಹಾರ ನಿಧಿ ಖಾತೆಯಲ್ಲಿ ಅನುದಾನವಿದ್ದು, ಹಾನಿಗೊಳಗಾಗಿರುವ ಪ್ರದೇಶಗಳಿಗೆ ಅವಶ್ಯಕತೆ ಅಗನುಗುಣವಾಗಿ ಹಣ ಬಿಡುಗಡೆ ಮಾಡಬಹುದಾಗಿದ್ದು, ಕೇಂದ್ರ ಸರ್ಕಾರದ ಬೆಳೆ ಹಾನಿ ಪರಿಹಾರ ಇನ್ನೂ ನಾಲ್ಕೈದು ದಿನಗಳಲ್ಲಿ ಬರಲಿದೆ ಎಂದು ಭರವಸೆ ನೀಡಿದರು. ಸಂತ್ರಸ್ತರನ್ನು ಸ್ಥಳಾಂತರಿಸಲು ಜಾಗ ಗುರುತಿಸಿರುವ ಬಗ್ಗೆ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದ್ದು ಮಳೆಹಾನಿಯಿಂದ ಭಾಗಶಃ ಶೇ.80 ರಷ್ಟು ಮನೆ ಕಳೆದುಕೊಂಡವರಿಗೆ ಶೀಘ್ರವಾಗಿ ರೂ. 1 ಲಕ್ಷ ಪರಿಹಾರ ನೀಡಲಾಗುವುದು. ಈ ಹಣವನ್ನು ನೆರೆ ಸಂತ್ರಸ್ತರಿಗೆ ನೇರವಾಗಿ ನೀಡುವುದರಿಂದ ತಮ್ಮ ತಮ್ಮ ಮನೆಗಳ ದುರಸ್ಥಿ ಕಾರ್ಯಗಳನ್ನು ಸುಲಭವಾಗಿ ಸಂತ್ರಸ್ತರೇ ಕೈಗೊಳ್ಳಬಹುದಾಗಿದ್ದು. ನೆರೆ ಸಂತ್ರಸ್ತರ ಮಕ್ಕಳಿಗೆ ಅವಶ್ಯವಿರುವ ಶಿಕ್ಷಣವನ್ನು ಒದಗಿಸಬೇಕು ಹಾಗೂ ಸಂತ್ರಸ್ತ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಅನುತ್ತೀರ್ಣ ಮಾಡಬಾರದೆಂದು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು. ಮಳೆಯಿಂದಾ ನೋಂದ ಸಂತ್ರಸ್ತರಿಗೆ 100 ದಿನಗಳ ನರೇಗಾದ ವತಿಯಿಂದ ಕೆಲಸ ಒದಗಿಸಲಾಗುವುದು ಎಂದು ಮೂಡಿಗೆರೆಯಲ್ಲಿ ಸಚಿವ ಆರ್ ಅಶೋಕ್ ಹೇಳಿದರು....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.