ಚಿಕ್ಕಮಗಳೂರು: ಅಂಗಾಂಗ ದಾನ ಮಾಡಿದ ಯುವತಿ ರಕ್ಷಿತಾ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಭೇಟಿ ನೀಡಿ, ಕುಟುಂಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ರಕ್ಷಿತಾ ಕುಟುಂಬಕ್ಕೆ 8 ಲಕ್ಷದ ಪರಿಹಾರದ ಚೆಕ್ ವಿತರಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸೋಮನಹಳ್ಳಿ ತಾಂಡಾದಲ್ಲಿರುವ ರಕ್ಷಿತಾ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಜಿಲ್ಲಾಡಳಿತದಿಂದ 5 ಲಕ್ಷ, ಬೈರತಿ ಬಸವರಾಜ್ ವ್ಯಯಕ್ತಿಕವಾಗಿ 2 ಲಕ್ಷ, ತಾಂಡಾ ನಿಗಮದಿಂದ 1 ಲಕ್ಷ ರೂ ಸೇರಿ ಒಟ್ಟು 8 ಲಕ್ಷ ಮೊತ್ತದ ಚೆಕ್ಅನ್ನು ಸಚಿವರು ವಿತರಣೆ ಮಾಡಿದರು.
(ಓದಿ: ವಿದ್ಯಾರ್ಥಿನಿ ರಕ್ಷಿತಾ ಅಂತಿಮ ದರ್ಶನ..ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬಸವನಹಳ್ಳಿ ಕಾಲೇಜು)
ಎಂಟು ದಿನದ ಹಿಂದೆ ಬಸ್ ಹತ್ತುವಾಗ ರಕ್ಷಿತಾ ಕೆಳಗೆ ಬಿದ್ದಿದ್ದರು. ಬಸ್ಸಿನಿಂದ ಬಿದ್ದ ಬಳಿಕ ಮೆದುಳು ನಿಷ್ಕ್ರಿಯಗೊಂಡಿತ್ತು. ಹಾಗಾಗಿ, ಕುಟುಂಬಸ್ಥರು ಆಕೆಯ ಎಲ್ಲ ಅಂಗಗಳನ್ನ ದಾನ ಮಾಡಿದ್ದರು. ಆಕೆಯ ಅಂಗಾಂದಿಂದ ಒಂಬತ್ತು ಜನರ ಜೀವ ಉಳಿದಿತ್ತು. ಇಂದು ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರ ಮನೆಗೆ ಭೇಟಿ ನೀಡಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
(ಓದಿ: ನನ್ನ ಮಗಳು ಇನ್ನೂ ನಾಲ್ಕು ದಿನ ನಮ್ಮೊಂದಿಗೆ ಜೀವಿಸಬೇಕು.. ಮಗಳ ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ)