ETV Bharat / state

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾ.ಮಾ ಶ್ರೀಕಂಠಯ್ಯಗೆ ಸಚಿವ ಈಶ್ವರಪ್ಪ ಅಭಿನಂದನೆ - rajyotsava award winner

ಶ್ರೀಕಂಠಯ್ಯ ಅವರು ಸಂಘಟನೆಯ ಮೂಲಕ ಯೋಗ ಕಲಿಸಿಕೊಟ್ಟವರು. ಇಡೀ ಜೀವನವನ್ನು ಯೋಗಕ್ಕಾಗಿ, ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದರು. ಇಂಥವರಿಗೆ ಪ್ರಶಸ್ತಿ ದೊರಕಿರುವುದು ಸಮಂಜಸ..

minister eshwarappa honors rajyotsava award winner shrikantayya
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾ.ಮಾ ಶ್ರೀಕಂಠಯ್ಯಗೆ ಸಚಿವ ಈಶ್ವರಪ್ಪ ಅಭಿನಂದನೆ
author img

By

Published : Nov 3, 2021, 2:14 PM IST

ಶಿವಮೊಗ್ಗ : ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಭಾ.ಮಾ ಶ್ರೀಕಂಠಯ್ಯ ಅವರ ಮನೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.

ನಗರದ ಬಿ ಬಿ ರಸ್ತೆಯಲ್ಲಿರುವ ಶ್ರೀಕಂಠಯ್ಯ ಅವರ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಶ್ರೀಕಂಠಯ್ಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ನಮಗೆ ಸಂತಸ ತಂದಿದೆ.

ಶ್ರೀಕಂಠಯ್ಯ ಅವರು ಸಂಘಟನೆಯ ಮೂಲಕ ಯೋಗ ಕಲಿಸಿಕೊಟ್ಟವರು. ಇಡೀ ಜೀವನವನ್ನು ಯೋಗಕ್ಕಾಗಿ, ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದರು. ಇಂಥವರಿಗೆ ಪ್ರಶಸ್ತಿ ದೊರಕಿರುವುದು ಸಮಂಜಸ ಎಂದು ತಿಳಿಸಿದರು. ನಾನೂ ಸಹ ಇಂದಿನಿಂದ ಯೋಗ ಕಲಿಯುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಜಗದೀಶ್, ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.